ಇಂದು ಬೆಳಿಗ್ಗೆ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರರವರು ತೀರ್ಥಹಳ್ಳಿ ತಾಲ್ಲೂಕಿನ ಬೇಗುವಳ್ಳಿ ಸಮೀಪ ಹಸುವೊಂದು ರಸ್ತೆ ಅಡ್ಡ ಬಂದ ಪರಿಣಾಮ ಯುವಕನೊಬ್ಬ ಅಪಘಾತವಾಗಿ ಬಿದ್ದಿದ್ದನ್ನು ಗಮನಿಸಿ ತಕ್ಷಣ ವಾಹನ ನಿಲ್ಲಿಸಿ ಗಾಯಗೊಂಡ ಯುವಕನನ್ನು ಬೆಂಗಾಲು ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ನೆರವಾದರು.