ಕಳೆದ ೧೫ ದಿನಗಳಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಒಳಗುತ್ತಿಗೆ ನೌಕರರು ನೌಕರಿ ಖಾಯಂಗೊಳಿಸುವಂತೆ ಮತ್ತು ವೇತನ ಹೆಚ್ಚಿಸುವಂತೆ ರಾಜ್ಯದ ವಿವಿಧ ಭಾಗಗಳಿಂದ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಸದನದಲ್ಲೂ ಕೂಡ ಈ ವಿಷಯದ ಬಗ್ಗೆ ವಿಧಾನ ಪರಿಷತ್ ಶಾಸಕ ಟಿ. ಎ.ಶರವಣ ಅವರು ಪ್ರಸ್ತಾಪಿಸಿದರು ಹಾಗೆ ಇಂದು ಹೋರಾಟ ನಿರತ ಕಾರ್ಮಿಕ ವರ್ಗದವರಿಗೆ ೫೦೦೦ ಪ್ಯಾಕೆಟ್ ಆಹಾರ ವಿತರಣೆ ಮಾಡಲಾಯಿತು.