ರಾಷ್ಟ್ರ, ನಾಡು ಹಾಗೂ ಪರಿಷತ್ ಧ್ವಜಾರೋಹಣ ನೆರವೇರಿಸುವ ಮೂಲಕ ಇಂದು ಕುಂದಗೋಳದಲ್ಲಿ 9 ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ರಾಯನಾಳ ವಿರಕ್ತಮಠದ ರೇವಣಸಿದ್ದೇಶ್ವರಶ್ರೀ, ಕಲ್ಯಾಣಪುರ ಅಭಿನವ ಬಸವಣ್ಣಜ್ಜನವರು, ದೊಡ್ಡಬಳ್ಳಾಪುರ ನಿರಂಜನ ದೇಶಿಕೇಂದ್ರ ಶ್ರೀ, ಸಮ್ಮೇಳನಾಧ್ಯಕ್ಷ ಡಾ. ಶಿವಾನಂದ ಕಲ್ಲೂರ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ತಾಲೂಕ ಅಧ್ಯಕ್ಷ ಡಾ. ಪ್ರಭುಗೌಡ ಸಂಕಾಗೌಡಶಾನಿ, ಎ. ಬಿ. ಉಪ್ಪಿನ, ಡಾ. ವೆಂಕಟಗಿರಿ ದಳವಾಯಿ, ಎಂ. ಎಸ್. ಅಕ್ಕಿ, ಜಿ. ಡಿ. ಘೋರ್ಪಡೆ, ಕರವೇ ಅಧ್ಯಕ್ಷ ಕಲ್ಲಪ್ಪ ಹರಕುಣಿ, ಎಂ. ಎಸ್ ಮಾಳವಾಡ, ಸಿ. ಬಿ. ಪಾಟೀಲ, ಶಂಭುಲಿಂಗಪ್ಪ ನಂದೆಮ್ಮನವರ, ಅಪ್ಪಣ್ಣ ಹಿರೇಗೌಡ್ರ, ಜಗನ್ನಾಥಗೌಡ ಸಿದ್ಧನಗೌಡ್ರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.