ಧಾರವಾಡ ಶಹರದ ಕೊಳಚೆ ಪ್ರದೇಶಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಹಾಗೂ ನೀರಿನ ಬಿಲ್, ಮನೆಯ ಕಂದಾಯ ಕಡಿಮೆ ಮಾಡಲು ಹಾಗೂ ವಸತಿ ರಹಿತ ಫಲಾನುಭವಿಗಳಿಗೆ ವಸತಿ ನಿರ್ಮಾಣ ಮಾಡಿ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ಸಮಗ್ರ ಪ್ರಜೆಗಳ ಧ್ವನಿ ಸಮಿತಿ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿ ಧಾರವಾಡ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ ಮಾಡಲಾಯಿತು. ಅಶೋಕ ಭಂಡಾರಿ, ಪಾರ್ವತಿ ಹಿತ್ತಲಮನಿ, ವಿನಿತಾ ಕದಂ, ಭಾಷಾ ಬಳ್ಳಾರಿ, ಆನಂದ ಕನ್ನೂರ, ರಾಜು ಗರಗ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.