629 ಹಜ್ ಯಾತ್ರಾರ್ಥಿಗಳಿಗೆ ಲಸಿಕೆ:ಡಾ.ಶರಣಬಸಪ್ಪ ಕ್ಯಾತನಾಳ

ಕಲಬುರಗಿ,ಮೇ,01: ಕಲಬುರಗಿ ಜಿಲ್ಲೆಯಿಂದ ಹಜ್ ಯಾತ್ರೆಗೆ ತೆರಳುವವರು 542 ಹಾಗೂ ಯಾದಗಿರಿ ಜಿಲ್ಲೆಯ 87 ಯಾತ್ರಾರ್ಥಿಗಳಿಗೆ ಒಟ್ಟು 629 ಹಜ್ ಯಾತ್ರಾರ್ಥಿಗಳಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಜಿಲ್ಲಾ ಆರ್ ಸಿ ಎಚ್ ಅಧಿಕಾರಿಗಳಾದ ಡಾ.ಶರಣಬಸಪ್ಪ ಕ್ಯಾತನಾಳ ಹೇಳಿದರು.
ಜಿಲ್ಲೆಯ ನಗರ ನಯಾ ಮೋಹಲ್ಲಾ ಪ್ರದೇಶದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್ ಸಿ ಎಚ್ ವಿಭಾಗ ಹಾಗೂ ಹಜ್ ಕಮಿಟಿ ಕಲಬುರಗಿ ರವರ ಸಹಯೋಗದಲ್ಲಿ ಹಜ್ ಯಾತ್ರಿಕರು 2024 ಹಜ್ ಯಾತ್ರೆಗೆ ಹೋಗುವ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ಯಾತ್ರಾರ್ಥಿ ಗಳಿಗೆ ಲಸಿಕೆ ಹಾಕುವ ಶಿಬಿರವನ್ನು ಹಜ್ ಕಮಿಟಿ ಕಚೇರಿಯಲ್ಲಿ ಆಯೋಜಿಸಲಾಯಿತು. ಈ ಶಿಬಿರದಲ್ಲಿ ಲಸಿಕಾಕರಣದ ಮಾರ್ಗಸುಚಿಯಂತೆ ಜಿಮ್ಸ್ ಜಿಲ್ಲಾಸ್ಪತ್ರೆ ಯಿಂದ ತಜ್ಞ ವೈದ್ಯರಾದ ಡಾ. ನಸರತ ಜಹಾನ್ ( ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞರು ) ಡಾ. ಆಸ್ಮಾ ( Phಥಿsiಛಿiಚಿಟಿ ) ಡಾ. ಮನಿದೇವಿ ( ಶ್ವಾಸಕೋಶ ತಜ್ಞರು ) ಡಾ. ಜಯರಾಜ್ ( ಚಿಕ್ಕ ಮಕ್ಕಳ ತಜ್ಞರು ) ತಾಲೂಕು ಆರೋಗ್ಯ ಅಧಿಕಾರಿಗಳದ ಡಾ. ಮಾರುತಿ ಕಾಂಬ್ಳೆ, ಡಾ. ವೇಣುಗೋಪಾಲ್ ದೇಶಪಾಂಡೆ, ಆಡಳಿತ ವೈದ್ಯಧಿಕಾರಿಗಳು ತಾಜ್ ನಗರ, ಡಾ. ರೇಣುಕಾ ಕಟ್ಟಿ, ಆಡಳಿತ ವೈದ್ಯಧಿಕಾರಿಗಳು ಮಕ್ತಾಮಪುರ್, ಡಾ. ಮಂಗಲಾ ಪಾಟೀಲ್ ವೈದ್ಯಧಿಕಾರಿಗಳು, ಖಾನಾಪುರ, ಡಾ. ಇಸಾಮುದ್ದಿನ್. ಆಯುಷ್ ವೈದ್ಯಧಿಕಾರಿಗಳು, ಹಾಗೂ ಅರೋಗ್ಯ ಇಲಾಖೆಯ ಲಸಿಕಾರಣ ಸಿಬ್ಬಂದಿಗಳು, ಮೇಲ್ವಿಚಾರಣಾ ಸಿಬ್ಬಂದಿಗಳು, ಹಾಗೂ ಹಜ್ ಕಮಿಟಿಯ ಸಂಘಟಕ ಮೌಲಾನಾ ಯಾಹ್ಯಾ, ಮಜರ್ ಹುಸೇನ್ ಹಾಗೂ ರಝಿಯುದ್ದಿನ್ ಖಾತಿಫ್ ಹಜ್ ಕಮಿಟಿ ಮುಖ್ಯಸ್ಥರು ಇದ್ದರು.