ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ನಾಡಿನ ಹೆಸರಾಂತ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ೨೦೨೩ರ ಗೋಡೆ ಕ್ಯಾಲೆಂಡರನ್ನು ಇಂದು ಬಿಡುಗಡೆ ಮಾಡಿದರು. ಸಂಘದ ಅಧ್ಯಕ್ಷ ಯತಿರಾಜು, ಉಪಾಧ್ಯಕ್ಷ ಶಿವಣ್ಣ, ನಿರ್ದೇಶಕರಾದ ರಾಘವೇಂದ್ರ ಕೆ. ತೊಗರ್ಸಿ, ಬಿ.ಎನ್. ಮೋಹನ್ ಕುಮಾರ್, ಸಚ್ಚಿದಾನಂದ ಕುರಗುಂದ, ಕೆ.ಎಂ. ಪಂಕಜ, ಮಂಜುಶ್ರೀ ಕಡಕೋಳ, ಕಾರ್ಯದರ್ಶಿ ಎನ್.ಪಿ. ನಿರ್ಮಲ (ಪ್ರಭಾರ) ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.