ನಗರದಲ್ಲಿ ನಡೆದ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಭಾರತ ದೇಶದ ಅನೇಕ ರಾಜ್ಯಗಳಿಂದ ಬಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಕಲಾತಂಡಗಳನ್ನು ವಿಮಾನ ನಿಲ್ದಾಣದಲ್ಲಿ ಜಾನಪದ ನೆರಳು ಸಂಶೋಧನಾ ಕೇಂದ್ರದ ಸಾಲಿಯಾನ್ ಸಂತೋಷ್ ರವರ ತಂಡ ಉತ್ತರ ಕರ್ನಾಟಕ ಶೈಲಿಯಲ್ಲಿ ಜೋಗತಿ ನೃತ್ಯ, ಕಂಸಾಳೆ ಕಲೆಯ ಮೂಲಕ ಹಾಗೂ ದ್ಯಾಮಣ್ಣ ಲಮಾಣಿ ತಂಡ ಡೊಳ್ಳು ಕುಣಿತದ ಮೂಲಕ ಸ್ವಾಗತಿಸಿದರು. ಕಲಾವಿದರಾಗಿ ಜ್ಯೋತಿ ಮಡಿವಾಲರ್, ಸಹನಾ ಬಣ್ಣಗ್ಗಿ, ಮಂಜುನಾಥ್ ಬರ್ಕೆರ್, ಸಾಲಿಯಾನ್ ಸಂತೋಷ್ ಹಾಗೂ ಶಿಕ್ಷಣ ಇಲಾಖೆಯಿಂದ ವೈಭವ ರೂಪಕವಾಗಿ ಸ್ವಾಗತಿಸಿದ್ದು ವಿಶೇಷವಾಗಿತ್ತು.