ಬೆಂಗಳೂರಿನ ಪ್ರದೀಪ ಮತ್ತು ತುಮಕೂರಿನ ಪ್ರಸಾದ ಅವರುಗಳ ಆತ್ಮಹತ್ಯೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ವತಿಯಿಂದ ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಸತೀಶ್ ಮೆಹರವಾಡೆ, ರಾಬರ್ಟ್ ದದ್ದಾಪುರಿ, ಪಾರಸಮಲ್ ಜೈನ್, ಗಂಗಾಧರ ದೊಡವಾಡ, ಈಶ್ವರ ಶಿರಸಂಗಿ, ಮಹೇಶ್ ದಾಬಡೆ, ಪೀರಾಜಿ ಖಂಡೇಕರ, ಸಮೀರ ಖಾನ್, ಅರವಿಂದ ಮೆಹರವಾಡೆ, ಶಂಕರ ಸಿದ್ದಲಿಂಗ, ಭೀಮಣ್ಣ ಬಡಿಗೇರ, ಮೋಹನ್ ಹೊಸಮನಿ, ಬಸವರಾಜ ಕಲಾದಗಿ, ರುಕ್ಮಿಣಿ ಚಲವಾದಿ ಮತ್ತಿತರರು ಪಾಲ್ಗೊಂಡಿದ್ದರು.