61ನೆಯ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮ

ಭಾಲ್ಕಿ:ಮೇ.27: ತಾಲೂಕಿನ ಉಚ್ಛಾ ಗ್ರಾಮದ ಪೂಜ್ಯ ಶ್ರೀ ದಿವ್ಯಯೋಗಿ ಶ್ರೀ ಕಂಠಯ್ಯಾ ಸ್ವಾಮಿಗಳ 61ನೆಯ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮ ದಿನಾಂಕ 28-05-2024ರ ಮಂಗಳವಾರ ಬೆಳಿಗ್ಗೆ 12 ಗಂಟೆಗೆ ಪೂಜ್ಯ ಶ್ರೀ ಕಂಠಯ್ಯ ಸ್ವಾಮಿಗಳ ಲಿಂಗಯೋಗ ಧ್ಯಾನ ಮಂದಿರದಲ್ಲಿ ಜರುಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂತಯ್ಯ ಸ್ವಾಮಿಗಳು ವಹಿಸುವರು. ಶ್ರೀಮತಿ ಚೈತನ್ಯ ವಿಶಾಲ ಸ್ವಾಮಿ ದಂಪತಿಗಳು ಬಸವ ಗುರು ಪೂಜೆಯನ್ನು ನೆರವೇರಿಸುವರು. ಕವನ ಸ್ವಾಮಿ ವಚನ ಗಾಯನ ಮಾಡುವರು. ಸುನೀತಾ ಸ್ವಾಮಿ ಭಕ್ತಿಗೀತೆ ಹಾಡುವರು. ಚಂದನ ಸ್ವಾಮಿ ನಿರೂಪಿಸುವರು. ಶ್ರೀದೇವಿ ಸ್ವಾಮಿ ವಚನ ಪಠಣ ಮಾಡುವರು. ಸುಧಾರಾಣಿ, ಶಿವಯೋಗಿ ಮಠಪತಿ, ಸಿದ್ದಲಿಂಗ ಮಠಪತಿ ಬಸವ ನಾಮಾವಳಿ ಹಾಗೂ ಶಿವನಾಮ ಸ್ಮರಣೆ ಮಾಡುವರು. ಎಂದು ಶ್ರೀ ಶಾಂತಯ್ಯಾ ಸ್ವಾಮಿಗಳು ಅಧ್ಯಕ್ಷರು ಲಿಂಗಯೋಗ ಧ್ಯಾನ ಮಂದಿರ ಉಚ್ಚ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.