609 ಅಂಕ ಗಳಿಸಿ ಸೇಡಂಗೆ ಕೀರ್ತಿ ತಂದ ಭಾಗ್ಯಶ್ರೀ

ಸೇಡಂ, ಮೇ,09: ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು ತಾಲೂಕಿನ ಬಿಬ್ಬಳ್ಳಿ ಸರ್ಕಾರಿ ಆದರ್ಶ ವಿದ್ಯಾಲಯ ಶಾಲೆಯ ಕುಮಾರಿ ಭಾಗ್ಯಶ್ರೀ ಅವರು 609 ಅಂಕ ಗಳಿಸುವ ಮೂಲಕ ಸೇಡಂ ತಾಲೂಕಿಗೆ ಕೀರ್ತಿ ತಂದು ಕೊಟ್ಟಿದ್ದಾರೆ ಎಂದು ಸಂಜೆವಾಣಿಗೆ ದೂರವಾಣಿ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ ಮಾತನಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.