600ಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

ಮೈಸೂರು: ಜೂ.03: ಚಾಮರಾಜ ಕ್ಷೇತ್ರದ 25ನೇ ವಾರ್ಡ್ ತಿಲಕನಗರದಲ್ಲಿ ಮಿಷನ್ ಆಸ್ಪತ್ರೆ ವತಿಯಿಂದ ಆರ್ಥಿಕವಾಗಿ ಹಿಂದುಳಿದಿರುವ 600ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಫಾರುಕ್ಯ ಕಾಲೇಜು ಆವರಣ ಬಳಿ ಚಾಮರಾಜ ಕ್ಷೇತ್ರದ ಶಾಸಕರಾದ ಎಲ್. ನಾಗೇಂದ್ರ ರವರು ಚಾಲನೆ ನೀಡಿದರು.
ನಂತರ ಶಾಸಕರಾದ ಎಲ್. ನಾಗೇಂದ್ರ ರವರು ಮಾತನಾಡಿ ಲಾಕ್ ಡೌನ್ ನೀತಿನಿಯಮಾನುಸಾರ ಸಾರ್ವಜನಿಕರು ಪಾಲಿಸುವುದು ಅವಶ್ಯಕವಾಗಿದೆ, ನಾಗರೀಕರು ಸಾಮಾಜಿಕ ಅಂತರ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಲು ಮುಂದಾದರೆ ಮಾತ್ರ ಕೋವಿಡ್ ಸೊಂಕು ಮೈಸೂರಿನಲ್ಲಿ ಕಡಿಮೆಯಾಗಬಹುದಾಗಿದೆ, ಕೊವಿಡ್ ಸಂಧರ್ಭದಲ್ಲಿ ಮೈಸೂರಿನಲ್ಲಿ ಮಿಷನ್ ಆಸ್ಪತ್ರೆ ಬಡಜನರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾದುದು ಎಂದರು.
ನಂತರ ಸಮಾಜಸೇವಕರಾದ ದಿಲೀಪ್ ರವರು ಮಾತನಾಡಿ ರಾಜ್ಯಸರ್ಕಾರ ಈಗಾಗಲೇ ಆಟೋ ಕಾರ್ ಚಾಲಕರಿಗೆ ಮತ್ತು ಕಲಾವಿದರಿಗೆ, ಕಾರ್ಮಿಕರಿಗೆ, ಆರ್ಥಿಕ ಸಂಕಷ್ಟ ಪ್ಯಾಕೇಜ್ ಬಿಡುಗಡೆ ಮಾಡಿದ್ದು ಸೇವಾಸಿಂಧೂ ಪೆÇೀರ್ಟಲ್ ನಲ್ಲಿ ನೊಂದಣಿಯಾಗಿ ಆರ್ಥಿಕ ಸಹಾಯ ಪಡೆಯಲು ಮುಂದಾಗಬೇಕು ಎಂದರು.
ಚಾಮರಾಜ ಕ್ಷೇತ್ರದ ಶಾಸಕರಾದ ಎಲ್.ನಾಗೇಂದ್ರ, ಹೋಲ್ಡ್ಸ್ ವರ್ತ್ ಮೆಮೋರಿಯಲ್ ಆಸ್ಪತ್ರೆ ನಿರ್ದೇಶಕರಾದ ವಿನ್ಸೆಂಟ್ ಪಾಲಣ್ಣ, ಸಮಾಜಸೇವಕರಾದ ದಿಲೀಪ್, ನಗರಪಾಲಿಕೆ ಸದಸ್ಯರಾದ ಆರ್. ರಂಗಸ್ವಾಮಿ, ಚಾಮಾರಾಜ ಬಿಜೆಪಿ ಯುವ ಮೋರ್ಛಾ ಅಧ್ಯಕ್ಷರಾದ ಸಚ್ಚಿನ್, ಅಜಯ್ ಶಾಸ್ತ್ರಿ, ಚೇತನ್, ಸ್ವಾಮಿ, ರಾಘವೇಂದ್ರ, ಜಯಪ್ರಕಾಶ್ ಹಾಗೂ ಇನ್ನಿತರರು ಇದ್ದರು.