
ಬೀದರ:ಮೇ.19:60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಊಟ ದಲ್ಲಿ ಮಿತವ್ಯಯ, ನಿಯ ಮಿತ ಯೋಗ- ವ್ಯಾಯಾಮ,ಬೇರೆಯವರ ಜೊತೆಗೆ ಮೃದುತ್ವದ ವರ್ತನೆ ಸೇರಿದಂತೆ ಜೀವನ ಶೈಲಿಯಲ್ಲಿ ಬದಲಾವಣೆ ತಂದುಕೊಂಡರೆ ಆರೋಗ್ಯ ವಂತರಾಗಿ ಶತಾಯುಷಿ ಗಳಾಗಿ ಬಾಳಬಹುದು ಎಂದು ಬಿ. ವಿ. ಭೂಮರೆಡ್ಡಿ ಮಹಾ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಪೆÇ್ರ. ದೇವೇಂದ್ರ ಕಮಲ್ ರವರು ಅಭಿಪ್ರಾಯ ಪಟ್ಟರು. ಅವರು ಇಂದು ರಾಮಪುರೆ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ, ತಮ್ಮ 88 ನೇ ಹುಟ್ಟು ಹಬ್ಬದ ಪ್ರಯುಕ್ತ, ಪಾಪನಾಶ್ ನಗೆಕೂಟ ಹಾಗೂ ಜೈಹಿಂದ ಹಿರಿಯ ನಾಗರಿಕರ ಸಂಘವು ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತ ನಾಡುತ್ತಿದ್ದರು. ಮುಂದು ವರೆದು ಮಾತನಾಡಿ, ತರ ಕಾರಿ ಹಣ್ಣು ಹಂಪಲು ಗಳಂತಹ ಸಾತ್ವಿಕ ಆಹಾರ ದ ಸೇವನೆ ಹಾಗೂ ದುಶ್ಚಟ ಗಳಿಂದ ದೂರವಿದ್ದರೆ ಆಸ್ಪತ್ರೆಗೆ ಅಲೆದಾಡುವ ಅಗತ್ಯ ವಿರುವುದಿಲ್ಲವೆಂದು ತಿಳಿಸಿದರು. ನಗೆಕೂಟದ ಅಧ್ಯಕ್ಷರಾದ ಸಿದ್ದಯ್ಯ ಕವಡಿಮಠ್ ರವರು ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಅಧಿಕಾರಿ ವೀರ ಭದ್ರಪ್ಪ ಉಪ್ಪಿನ್ ರವರು ಕಮಲ್ ದಂಪತಿಗಳಿಗೆ ಸಸಿ ವಿತರಣೆ ಮಾಡಿ ನಿರೂಪಣೆ ಮಾಡಿದರು. ನಾರಾಯಣ ರಾವ ಕಾಂಬಳೆ ಯವರು ಸ್ವಾಗತ ಗೀತೆ ಹಾಡಿದರು. ಸುದೀಷ್ಣ ಕಮಲ್ ರವರು ಸ್ವಾಗತಿಸಿದರು. ಅನಿತಾ ರವರು ಕೊನೆಯಲ್ಲಿ ವಂದಿಸಿದರು. ಜೈಹಿಂದ ಸಂಘದ ಅಧ್ಯಕ್ಷ ಆರ್. ಆರ್. ಮುನಿಗ್ಯಾಲ, ನಗೆ ಕೂಟದ ಕಾರ್ಯದರ್ಶಿ ಭೀಮಾಶಂಕರ, ಖಜಾಂಚಿ ಮಹಾಲಿಂಗಪ್ಪ ಬೆಲ್ದಾಳೆ, ಮಲ್ಲಿಕಾರ್ಜುನ ಮಠ್, ಎಸ್. ಬಿ. ಬಿರಾದಾರ್, ಗುಂಡಪ್ಪ ಘೋಡೆ, ಬಿ. ಎನ್. ಸ್ವಾಮಿ, ರವಿ ದೇಶ ಮುಖ, ಎಸ್.ಬಿ.ವಿಸಾಜಿ, ಚಂದ್ರಪ್ಪ ಬಿರಾದಾರ್, ಅಂತೇಶ್ವರ ಶೆಟಕಾರ್, ನಾಗಶೆಟ್ಟಿ, ಶಿವರಾಜ್ ಪಟಣೆ, ದಾಶಪ್ಪ ಭೋರ ಗುಂಡೆ, ಡಾ. ಪ್ರಭು ಶೆಟ್ಟಿ ಮಾಳಗೆ, ಬಿ. ಎನ್. ಪಾಟೀಲ, ವಿಶ್ವನಾಥ್ ಗಂದಿಗುಡೆ, ಗುಂಡಪ್ಪ, ಯೋಗೇಶ, ಸಂಗ ಶೆಟ್ಟಿ ಚಿಮಕೋಡೆ, ಸುಭಾಷ್, ದಮಯಂತಿ, ಶ್ರುತಿ, ಐಶ್ವರ್ಯ, ಈಶ್ವರಿ ಮುಂತಾ ದವರು ಹಾಜರಿದ್ದರು.