60 ನಾಮಪತ್ರಗಳ ಸಲ್ಲಿಕೆ

ಬೀದರ, ಏ. 21: ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ – 2023 ರ ಬೀದರ ಜಿಲ್ಲೆಯ 06 ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏಪ್ರಿಲ್ 20 ರಂದು ಐವತ್ತೊಂದು ಅಭ್ಯರ್ಥಿಗಳಿಂದ ಅರವತ್ತು ನಾಮ ಪತ್ರ ಸಲ್ಲಿಕೆಯಾಗಿವೆ.

47-ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದಿಂದ ಶರಣಬಸಪ್ಪ ಬಾಬು, ಉತ್ತಮ ಪ್ರಜಾಕೀಯ ಪಕ್ಷದಿಂದ ಶಿವಾಜಿ .ಡಿ, ಸ್ವತಂತ್ರ ಅಭ್ಯಾಥಿಯಾಗಿ ವೀರಾ ರೆಡ್ಡಿ, ಬಹುಜನ ಸಮಾಜವಾದಿ ಪಕ್ಷದಿಂದ ಧ್ಯಾನೇಶ್ವರ ಈಶ್ವರ, ರಾಷ್ಟ್ರೀಯ ಕಿಶಾನ ಬಹುಜನ ಪಕ್ಷದಿಂದ ಅಜಿತ ಗುರುನಾಥ ಗಾಯಕವಾಡ, ಜಾತ್ಯತೀಜ ಜನತಾದಳ ಪಕ್ಷದಿಂದ ಸಂಜುಕುಮಾರ ಬಾಬು, ರಾಷ್ಟ್ರೀಯ ನಿರ್ಮಾಣ ಪಕ್ಷದಿಂದ ಸೂರ್ಯಕಾಂತ ಅರ್ಜುನ, ಸ್ವತಂತ್ರ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಭಗವಂತ ಖೂಬಾ, ಭಾರತೀಯ ರಿಪಬ್ಲಿಕ್ ಪಕ್ಷದಿಂದ ಸ್ವೇತಾ ಜಾಧವ, ಸ್ವತಂತ್ರ ಅಭ್ಯರ್ಥಿಯಾಗಿ ತಾತೆರಾವ ಅಪ್ಪರಾವ ಅವರು ನಾಮಪತ್ರ ಸಲ್ಲಿಸಿದರೆ ಕಾಂಗ್ರೇಸ್ ಪಕ್ಷದಿಂದ ವಿಜಯಸಿಂಗ ಧರಮಸಿಂಗ ಮೂರು ನಾಮ ಪತ್ರ ಸಲ್ಲಿಸಿದರು.

48-ಹುಮನ್ನಾಬಾದ ವಿಧಾನ ಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದಿಂದ ಸಿದ್ದಲಿಂಗಪ್ಪಾ ನಾಗಭೂಷಣ ಎರಡು ನಾಮಪತ್ರ ಸಲ್ಲಿಸಿದ್ದಾರೆ.

49-ಬೀದರ ದಕ್ಷಿಣ ವಿಧಾನ ಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದಿಂದ ಎಮ್ ನಸೀಮೋದ್ದಿನ್ ಪಟೇಲ್, ಬಹುಜನ ಸಮಾಜವಾದಿ ಪಕ್ಷದಿಂದ ಕಪೀಲ್ ಪೀರಪ್ಪಾ, ಪಕ್ಷೇತರ ಅಭ್ಯರ್ಥಿಗಳಾಗಿ ಬಸವರಾಜ, ಹಾಗೂ ಅಮೀತ ಬಾಲಾಜಿ ನಾಮಪತ್ರ ಸಲ್ಲಿಸಿದರೆ, ಜಾತ್ಯತೀತ ಜನತಾದಳ ಪಕ್ಷದಿಂದ ಬಂಡೆಪ್ಪಾ ಖಾಶೆಂಪೂರ ಎರಡು ನಾಮಪತ್ರ ಸಲ್ಲಿಸಿದರು.

. 50-ಬೀದರ ವಿಧಾನ ಸಭಾ ಕ್ಷೇತ್ರದಿಂದ ಭಾರತೀಯ ರಿಪಬ್ಲಿಕ್ ಪಕ್ಷದಿಂದ ಮಹೇಶ ಮಾಣಿಕಪ್ಪಾ, ಜಾತ್ಯತೀತ ಜನತಾದಳ ಪಕ್ಷದಿಂದ ಸೂರ್ಯಕಾಂತ ನಾಗಮಾರಪಳ್ಳಿ, ಬಹುಜನ ಸಮಾಜ ಪಕ್ಷದಿಂದ ಅನಿಲಕುಮಾರ, ಪಕ್ಷೇತರ ಅಭ್ಯಾರ್ಥಿಗಳಾಗಿ ಗಣೇಶ್ವರ ಹೊಸಮನಿ, ಅಲಿ ಮೊಹಮೂದ ಖಾನ್, ಶೇಖ ಹಾಜಿ ಮನಿಯಾರ, ಸೈಯದ ವಾಹಿದ ಲಖನ್, ಗೂಂಡೋಜಿ ಬಾಬುರಾವ, ಮನೊಹರ ಘಾಳೆಪ್ಪಾ, ನಾಮಪತ್ರ ಸಲ್ಲಿಸಿದರೆ, ಕಾಂಗ್ರೇಸ್‍ನಿಂದ ರಹೀಮ್ ಖಾನ್ ಮತ್ತು ಭಾರತೀಯ ಜನತಾ ಪಕ್ಷದಿಂದ ಈಶ್ವರಸಿಂಗ ಠಾಕುರ ಅವರು ತಲಾ ಎರಡು ನಾಮಪತ್ರ ಸಲ್ಲಿಸಿದರು.

51-ಭಾಲ್ಕಿ ವಿಧಾನ ಸಭಾ ಕ್ಷೇತ್ರದಿಂದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಸಿದ್ರಾಮ ವೈಜಿನಾಥ ಸ್ವತಂತ್ರ ಅಭ್ಯಾರ್ಥಿಗಳಾಗಿ ಅಬ್ದುಲ್ ಜಮೀಲ್ ಹಾಗೂ ಉಮೇಶ ಗುಂಡೆರಾವ ನಾಮಪತ್ರ ಸಲ್ಲಿಸಿದರು.

52-ಔರಾದ ವಿಧಾನ ಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದಿಂದ ಬಾಬು ಮರೆಪ್ಪಾ, ಸಮಾಜವಾದಿ ಜನತಾ ಪಕ್ಷದಿಂದ ರಾಹುಲ್ ಬಾಬುರಾವ, ಕರ್ನಾಟಕ ರಾಷ್ಟ್ರೀಯ ಸಮಿತಿಯಿಂದ ಅಂಕೋಶ ಬಾಲಪ್ಪಾ, ರಾಷ್ಟ್ರೀಯ ಮರಾಠ ಪಕ್ಷದಿಂದ ಅನಿಲ್ ರಾಠೋಡ, ಆಮ್ ಆದ್ಮಿ ಪಕ್ಷದಿಂದ ಪ್ರಶಾಂತ ಮರೆಪ್ಪಾ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಲಕ್ಷ್ಮಣ ಶಂಕರಪ್ಪ, ಮತ್ತು ಪಕ್ಷೇತರ ಅಭ್ಯರ್ಥಿಗಳಾಗಿ ಡಾ.ಎಂ.ಪಿ ದಾರಕೇಶ್ವರಯ್ಯ, ರವೀಂದ್ರ ಸ್ವಾಮಿ, ಹಾಗೂ ವಿಜಕುಮಾರ ಪುಂಡಲೀಕ್ ನಾಮಪತ್ರ ಸಲ್ಲಿಸಿದ್ದಾರೆ.ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ.