60 ಜನರಿಂದ ಸ್ವಯಂ ಪ್ರೇರಿತ ರಕ್ತದಾನ

ಬೀದರ್: ನ.18:ಸಿದ್ಧಾರೂಢ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ 78ನೇ ಜಯಂತಿ ಮಹೋತ್ಸವ ನಿಮಿತ್ತ ನಗರದ ಶ್ರೀ ಸಿದ್ಧಾರೂಢ ಧರ್ಮಾರ್ಥ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 60 ಜನ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.
ರಕ್ತದಾನ ಪುಣ್ಯದ ಕೆಲಸವಾಗಿದೆ. ಒಬ್ಬರ ಜೀವ ಉಳಿಸಲು ನೆರವಾಗುತ್ತದೆ ಎಂದು ಬ್ರಿಮ್ಸ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಅಧೀಕ್ಷಕ ಡಾ. ಸತೀಶ್ ಹೇಳಿದರು.
ರಕ್ತದಾನದಿಂದ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ. ಕಾರಣ, ಎಲ್ಲರೂ ರಕ್ತದಾನಕ್ಕೆ ಮುಂದಾಗಬೇಕು ಎಂದು ಚಿದಂಬರ ಶಿಕ್ಷಣ ಸಂಸ್ಥೆಯ ನಿರ್ದೇಶಕ ಉದಯಭಾನು ಹಲವಾಯಿ ತಿಳಿಸಿದರು.
ಉಪ ಪ್ರಾಚಾರ್ಯೆ ಡಾ. ಶ್ರೀದೇವಿ ಸ್ವಾಮಿ, ಪ್ರಭು ಬೆಣ್ಣೆ, ಡಾ. ಅಶ್ವಿನ್‍ಕುಮಾರ, ಡಾ. ಧೂಳಪ್ಪ, ಡಾ. ಅನೂಪ್. ಡಾ. ಪ್ರವೀಣ ಸಿಂಪಿ, ಆಸ್ಪತ್ರೆಯ ಎಂ. ಆರ್. ಡಾ. ಓಂಕಾರ ಚನಶೆಟ್ಟಿ, ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ, ಡಾ. ಚಂದ್ರಪ್ಪ ಭತಮುರ್ಗೆ, ಮಾಣಿಕರಾವ್ ಪಾಂಚಾಳ, ಲಕ್ಷ್ಮಣ ಪೂಜಾರಿ, ಬಸವರಾಜ ಮ್ಯಾಗೇರಿ ಇದ್ದರು.
ಕಾಲೇಜಿನ ಪ್ರಾಚಾರ್ಯ ಡಾ. ಚಂದ್ರಕಾಂತ ಹಳ್ಳಿ ಸ್ವಾಗತಿಸಿದರು. ಡಾ. ದೀಪಾ ವಂದಿಸಿದರು.