60 ಚೀಲ ಪಡಿತರ ಅಕ್ಕಿ ವಶ

ಕಲಬುರಗಿ ಜ 12: ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 60 ಪಡಿತರ ಅಕ್ಕಿ, 75 ಸಾವಿರ ರೂ ನಗದು, ಮತ್ತು ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ನಗರದ ಸಬ್‍ಅರ್ಬನ್ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಫುಡ್ ಇನ್ಸ್‍ಪೆಕ್ಟರ್ ಶ್ರೀನಿವಾಸ ಅವರು ನೀಡಿದ ದೂರಿನ ಅನ್ವಯ, ದಾಳಿ ನಡೆಸಿದ ಪೊಲೀಸರು ಉಮರಗಾದ ನಬಿ ಮೆಹಬೂಬ್ ಶೇಖ್,ಈರಣ್ಣ ಬೇಲೂರು,ಅಳಂದದ ಮೈನುದ್ದೀನ್ ಚುನಾವಾಲೆ,ಅರುಣಕುಮಾರ ಕಡಗಂಚಿ ಎಂಬ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಬ್ ಅರ್ಬನ್‍ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಡು ತನಿಖೆ ನಡೆಸಿದ್ದಾರೆ.