60 ಅಸಹಾಯಕ ಕುಟುಂಬಗಳಿಗೆ ನೆರವಾದ ಉಲ್ಲಾಸಿನಿ ಮುದಾಳೆ

ಬೀದರ:ಮೇ.31: ನಗರಸಭೆ ಸದಸ್ಯೆ ಉಲ್ಲಾಸಿನಿ ವಿಕ್ರಮ್ ಮುದಾಳೆ ಇಲ್ಲಿಯ ವಾರ್ಡ್ ಸಂಖ್ಯೆ 18 ರ ವ್ಯಾಪ್ತಿಯ ಸಾಯಿ ಕಾಲೊನಿಯಲ್ಲಿ ಭಾನುವಾರ 60 ಕಡು ಬಡ, ಅಸಹಾಯಕ ಹಾಗೂ ನಿರ್ಗತಿಕ ಕುಟುಂಬಗಳಿಗೆ ಉಚಿತ ಆಹಾರಧಾನ್ಯ ಕಿಟ್ ವಿತರಿಸಿದರು.

ಅಕ್ಕಿ, ಗೋಧಿ, ಬೇಳೆ, ಸಿಹಿ ಎಣ್ಣೆ ಒಳಗೊಂಡ ಕಿಟ್, ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡಿದರು.

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಯಶಸ್ವಿ ಏಳು ವರ್ಷ ಪೂರೈಸಿದ ಪ್ರಯುಕ್ತ ಕೋವಿಡ್‍ನಿಂದ ಸಂಕಷ್ಟದಲ್ಲಿರುವವರಿಗೆ ನೆರವಾಗಲು ಆಹಾರಧಾನ್ಯ ಕಿಟ್ ವಿತರಿಸಲಾಗಿದೆ ಎಂದು ಉಲ್ಲಾಸಿನಿ ತಿಳಿಸಿದರು.

ಕೋವಿಡ್ ಸೋಂಕಿನಿಂದ ಇಡೀ ವಿಶ್ವವೇ ನಲುಗಿ ಹೋಗಿದೆ. ಸೋಂಕು ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ. ಸಣ್ಣಪುಟ್ಟ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಹಾಗೂ ಬಡವರು ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ. ಸೋಂಕಿನ ಸಂಕಷ್ಟದ ಈ ಸಂದರ್ಭದಲ್ಲಿ ಸಂಘ ಸಂಸ್ಥೆಗಳು, ದಾನಿಗಳು ಬಡವರಿಗೆ ಸಹಾಯಹಸ್ತ ಚಾಚಬೇಕಿದೆ ಎಂದು ಹೇಳಿದರು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಶಾಂತಕುಮಾರ ಮುದಾಳೆ, ಯುವ ಮುಖಂಡ ವಿಕ್ರಮ್ ಮುದಾಳೆ, ಸಾಗರ ಪಾಟೀಲ, ವಿನಾಯಕ ಮುದಾಳೆ, ದೇವೇಂದ್ರ ಮಾಸ್ಟರ್, ಮುಕುಂದ, ಕಡ್ಡಿ ಮೊದಲಾದವರು ಇದ್ದರು.