6.56 ಕೋಟಿ ರೂ ದಂಡ ಸಹಿತ ಆಸ್ತಿ ತೆರಿಗೆ ಪಾವತಿಸಿದ ಸೂಪರ್ ಸ್ಟಾರ್

ಚೆನ್ನೈ, ಅ .15-ನ್ಯಾಯಾಲಯದಲ್ಲಿ‌ ತಮ್ಮ ಆಸ್ತಿ ವಿಚಾರವಾಗಿ ತೀವ್ರ ಮುಜುಗರ‌ ಅನುಭವಿಸಿದ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಂತ್,ದಂಡ ಸಹಿತ ಅಸ್ತಿ ತೆರಿಗೆ ಪಾವತಿ ಮಾಡಿದ್ದಾರೆ.
ಕಲ್ಯಾಣ ಮಂಟಪದ ಆಸ್ತಿ ತೆರಿಗೆ ಕುರಿತಂತೆ ಚೆನ್ನೈ ಮಹಾನಗರ ಪಾಲಿಕೆಗೆ ಇಂದು 6.56 ಕೋಟಿ ರೂ ತೆರಿಗೆ ಪಾವತಿ ಮಾಡಿದ್ದಾರೆ.
ನಗರದ ಕೋಡಂಬಾಕಮ್ ನಲ್ಲಿ ರಜನಿಕಾಂತ್ ಅವರು ಶ್ರೀ ರಾಘವೇಂದ್ರ ಹೆಸರಿನ ಕಲ್ಯಾಣ ಮಟಂಪ ಹೊಂದಿದ್ದಾರೆ. ಆದರೆ ಆಸ್ತಿ ‌ತರಿಗೆ ಪಾವತಿಸಲು ವಿಳಂಬ ಮಾಡಿದ್ದರಿಂದ ಗ್ರೇಟರ್ ಚೆನ್ನೈ ಕಾರ್ಪೋರೇಷನ್ ದಂಡ ವಿಧಿಸಿತ್ತು.
ಈ ಕ್ರಮ ಪ್ರಶ್ನಿಸಿ ರಜನಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈ ಅರ್ಜಿಯ ವಿಚಾರಣೆ ನಡೆಸಿದ ವೇಳೆ ನ್ಯಾಯಾಲಯದ ಸಮಯ ಹಾಳು ಮಾಡುವಂಥದ್ದು ಎಂದು ನಿನ್ನೆ ಖಾರವಾಗಿ ಹೇಳಿ, ಅರ್ಜಿ ವಾಪಸ್ ಪಡೆಯದಿದ್ದರೆ ದಂಡ ವಿಧಿಸಬೇಕಾಗುತ್ತದೆ ಎಂದು ರಜನಿಕಾಂತ್ ಅವರಿಗೆ ಖಡಕ್ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರು ದಂಡ ಸಹಿತ ಆಸ್ತಿ ತೆರಿಗೆ ಪಾವತಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಜನಿಕಾಂತ್.
ಆಸ್ತಿ ತೆರಿಗೆ ಹಾಗೂ ದಂಡ ಪಾವತಿಗೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಕಿಸಬಹುದಾಗಿತ್ತು ಎಂದು ಹೇಳಿದ್ದಾರೆ.