6 ಸಾವಿರ ರೂ.ಮೌಲ್ಯದ ಬ್ಯಾಟರಿ, 4 ಸಾವಿರ ರೂ.ಮೌಲ್ಯದ ಕಾಪರ್ ಪೈಪ್ ಕಳವು

ಕಲಬುರಗಿ,ಜೂ.15-ನಗರದ ರೇವಣಸಿದ್ದೇಶ್ವರ ಕಾಲೋನಿಲ್ಲಿರುವ ಕೇಂದ್ರ ತೆರಿಗೆ ಮತ್ತು ಕೇಂದ್ರ ಅಬಕಾರಿ ಕಚೇರಿಯ ಜನರೇಟರ್ ಕೋಣೆ ಬೀಗ ಮುರಿದು ಕಳ್ಳರು 6000 ರೂ.ಮೌಲ್ಯದ ಬ್ಯಾಟರಿ ಮತ್ತು 4000 ರೂ.ಮೌಲ್ಯದ 8 ಫೀಟ್ ಉದ್ದದ ಕಾಪರ್ ಪೈಪ್ ಸೇರಿ 10 ಸಾವಿರ ರೂ.ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ.
ಈ ಸಂಬಂಧ ಕಚೇರಿಯ ಅಧೀಕ್ಷಕ ಹರ್ಷವರ್ಧನ ದೇಶಮುಖ ಅವರು ಅಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.