6 ಲಕ್ಷ ರೂ. ಲಪಟಾಯಿಸಲು  ನಾಟಕವಾಡಿದ ಗುಮಾಸ್ತ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಸೆ.16 ಪಟ್ಟಣದ ಮಾನ್ವಿ ಬ್ಯಾಂಕಿಗೆ 6 ಲಕ್ಷ ರೂ. ಜಮಾ ಮಾಡಲು  ಮಾರುತಿ ಟ್ರೇಡರ್ಸ್ ಮಾಲೀಕ ತಮ್ಮ ಗುಮಸ್ತ ಸಂತೋಷನನ್ನು ಮಂಗಳವಾರ ಬ್ಯಾಂಕಿಗೆ ಕಳುಹಿಸಿದ್ದಾರೆ . ಮಾರ್ಗಮಧ್ಯದ ಸಂದಿಯಲ್ಲಿ ಸಂತೋಷ್ ಕಣ್ಣಿಗೆ ಕಾರದ ಪುಡಿ ಎರಚಿ 6 ಲಕ್ಷ ರೂ. ಕಳ್ಳರು ದೋಚಿದ್ದಾರೆ ಎಂದು ಗೋಳಾಡಿದ್ದಾನೆ. ವಿಚಾರ ಮಾಲೀಕನಿಗೆ ಗೊತ್ತಾಗಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.. ತಕ್ಷಣ ಡಿವೈಎಸ್ಪಿ ಹರೀಶ್ ಮಾರ್ಗದರ್ಶನದಲ್ಲಿ ಸಿಪಿಐ   ಮಂಜಣ್ಣ ಪಿಎಸ್ಐ ಸರಳ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ನಂತರ ವಿಚಾರಣೆ ಒಳಪಡಿಸಿದಾಗ. ಗುಮಾಸ್ತ ಸಂತೋಷ್ ತನಗೆ ತಾನೇ ಕಾರ ಪುಡಿ ಎರಚಿಕೊಂಡು  6 ಲಕ್ಷ ರೂ. ತನ್ನ ಹೆಂಡತಿಯ ಲಕ್ಷ್ಮಿಗೆ ನೀಡಿ  ಲಪಟಾಯಿಸಲು ನಾಟಕ ಮಾಡಿದ್ದಾನೆ ಎಂಬುವುದು ಗೊತ್ತಾಗಿದೆ. ಸಂತೋಷ್ ಮತ್ತು ಆತನ ಹೆಂಡತಿ ಸುಬ್ಬಲಕ್ಷ್ಮಿ  ನಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ