
ಅಥಣಿ :ಆ.3: ಗಂಗಾಮತಸ್ಥರ ಕೋಳಿ ಸಮಾಜ ಸಂಘ ಚಿಕ್ಕೋಡಿ ವಿಭಾಗ, ಹಾಗೂ ವ್ಯಾಸ ಮಹರ್ಷಿ, ನಿಜಶರಣ ಅಂಬಿಗರ ಚೌಡಯ್ಯ ಯೋಗ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಅಥಣಿ ಇವರ ಸಂಯುಕ್ತ ಆಶ್ರಯದಲ್ಲಿ ಹಿರಿಯ ಸಾಹಿತಿ ಎಸ್ ಕೆ ಹೊಳೆಪ್ಪನವರ ರಚಿಸಿರುವ “ಗಂಗಾಮಾತೆ ಮಹಿಮೆ” ಪುಸ್ತಕ ಲೋಕಾರ್ಪಣೆ ಹಾಗೂ ಸನ್ 2022-2023ನೆಯ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಪರೀಕ್ಷೆಯಲ್ಲಿ ಶೇ 90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಗಂಗಾಮತ ಸಮಾಜದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ರಾಜ್ಯಮಟ್ಟದ ತೃತೀಯ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವು ಪಟ್ಟಣದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಭಾ ಭವನದಲ್ಲಿ ಇದೇ ಬರುವ ರವಿವಾರ ದಿ,6 ರಂದು ಮುಂಜಾನೆ 10 ಘಂಟೆಗೆ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕರ ಪರವಾಗಿ ಎಸ್ ಕೆ ಹೊಳೆಪ್ಪನವರ, ಮತ್ತು ಕಿಶೋರ ಶಿರಗೆ ಯವರು ತಿಳಿಸಿದರು,
ಅಂದು ಮುಂಜಾನೆ 10 ಘಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಗಂಗಾಮಾತೆ ಮಹಿಮೆ ಗ್ರಂಥವನ್ನು ಲೋಕಾರ್ಪಣೆ ನಡೆಯಲಿದ್ದು, ಕಾರ್ಯಕ್ರಮದಲ್ಲಿ ನಿವೃತ್ತ ವೈದ್ಯಾಧಿಕಾರಿ ಡಾ ಸುರೇಶ ಜೆ ಅಥಣಿ, ಖ್ಯಾತ ಸಾಹಿತಿ ಡಾ ಬಾಳಾಸಾಹೇಬ ಲೋಕಾಪುರ ಅವರು ಪುಸ್ತಕ ಲೋಕಾರ್ಪಣೆ ಮಾಡುವರು, ಹಾರೂಗೇರಿಯ ಡಾ ವಿ ಎಸ್ ಮಾಳಿ ಕಾರ್ಯಕ್ರಮವನ್ನು ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಅಥಣಿ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಆರ್ ಎಸ್ ದೊಡ್ಡನಿಂಗಪ್ಪಗೋಳ, ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್ ಎ ಚಿಕ್ಕಟ್ಟಿ ಯವರು ಆಗಮಿಸುವರು, ಚಿದಾನಂದ ಗೋಟೆ ಪುಸ್ತಕ ಪರಿಚಯ ಮಾಡುವರು,
ಇದೆ ಸಂದರ್ಭದಲ್ಲಿ ಅಥಣಿ ತಾಲೂಕಾ ಸರ್ಕಾರಿ ನೌಕರರ ಸಂಘದ ಅಧಕ್ಷರಾಗಿ ಆಯ್ಕೆಯಾದ ಆರ್.ಎಸ್. ಪಾಟೀಲ, ಅವರನ್ನು ಸನ್ಮಾನ ಮಾಡಲಾಗುವುದು.
ನಂತರ ಮುಂಜಾನೆ 11:30ಕ್ಕೆ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಜರುಗಲಿದ್ದು, ಅಧ್ಯಕ್ಷತೆಯನ್ನು ಜಿಲ್ಲಾ ಗಂಗಾಮತಸ್ಥರ ಸಮಾಜ ಸಂಘದ ನಿಕಟಪೂವ9 ಅಧ್ಯಕ್ಷ ಗಂಗಾರಾಮ ಜಿ ತಳವಾರ ಭಾಗವಹಿಸುವರು, ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಗಂಗಾಮತಸ್ಥರ ಸಮಾಜ ಸಂಘದ ಅಧ್ಯಕ್ಷ, ಜಿಲ್ಲಾ ಪಬ್ಲಿಕ್ ಟಿ ವಿ ವರದಿಗಾರರು, ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ದಿಲೀಪಕುಮಾರ ಕುರಂದೆವಾಡೆಯವರು ನೆರವೇರಿಸುವರು
ಮುಖ್ಯ ಅತಿಥಿಗಳಾಗಿ ಹಾಗೂ ವಿಶೇಷ ಉಪನ್ಯಾಸಕರಾಗಿ ಬೆಂಗಳೂರಿನ ಅಬಕಾರಿ ಅಧೀಕ್ಷಕ ವಿನೋದ ಬಿ ಢಂಗೆ, ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಸವರಾಜ ಸುಣಗಾರ ಆಗಮಿಸುವರು, ಪ್ರಾಚಾರ್ಯ ದೀಪಕ ಶಿ ಗಸ್ತಿ ಯವರು ಉಪಸ್ಥಿತರಿರುವರು,