6 ಮಕ್ಕಳ ಶಿಕ್ಷಣದ ವೆಚ್ಚ ಭರಿಸಿದ ವಾಲಿ

ಬೀದರ :ಎ.2: ವಾತ್ಸಲ್ಯ ಚಾರಿಟೇಬಲ್ ಟ್ರಸ್ಟ (ರಿ) ನಡೆಸುತ್ತಿರುವ ಅನಾಥ ಆಶ್ರಮ, ವೃದ್ದ ಆಶ್ರಮದಲ್ಲಿ ವಾಸಿಸುತ್ತಿರುವ ಆರು ಮಕ್ಕಳ ಒಂದು ವರ್ಷದ ಶಿಕ್ಷಣದ ಪೂರ್ಣ ಖರ್ಚುವೆಚ್ಚವನ್ನು ಆದಿಶ ವಾಲಿರವರು ವಹಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಆದಿಶ ವಾಲಿರವರು “ಅಂಧ, ಅನಾಥ, ಅಂಗವಿಕಲರ ಸೇವೆಯೇ ನಿಜವಾದ ಶಿವನ ಪೂಜೆ “ಎಂದು ಹೇಳಿದರು. ಲಿಂ ಡಾ // ಪುಟ್ಟರಾಜ ಗವಾಯಿಗಳ ಮಾತಿನಂತೆ ಅನಾಥರ ಆಶ್ರಮಕ್ಕೆ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ ತಾವು ಎಲ್ಲರೂ ಕೂಡ ಕೈಲಾದಷ್ಟು ಸಹಾಯ ಮಾಡಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಾತ್ಸಲ್ಯ ಚಾರಿಟೇಬಲ್ ಟ್ರಸ್ಟನ ಸಿಬ್ಬಂದಿಗಳಾದ ಪ್ರಭಾವತಿ, ನಿರ್ಮಲಾ ಅಮರ್ ಭಾವಿಕಟ್ಟಿ, ಶಿವಕುಮಾರ್ ಗಾಯಾಕವಾಡ ಹಾಗೂ ಸುಭಾಸ್ ಚಂದ್ರ ಭೋಸ್ ಯುವಕ ಸಂಘದ ಅಧ್ಯಕ್ಷರಾದ ರತ್ನದೀಪ ಕಸ್ತೂರೆ ಉಪಸ್ಥಿತರಿದ್ದರು