6 ಮಂದಿಯ ಸಜೀವ ದಹನ

ಮಡಿಕೇರಿ: ಏ.03: ಪತಿ, ಪತ್ನಿಯರ ನಡುವಿನ ಜಗಳದಿಂದಾಗಿ ಮನೆಗೆ ಬೆಂಕಿ ಇಟ್ಟ ಪರಿಣಾಮ 6 ಮಂದಿ ಸಜೀವ ದಹನವಾದ ಘಟನೆ ತಡರಾತ್ರಿ ನಡೆದಿದೆ.
ಮಡಿಕೇರಿ ಜಿಲ್ಲೆಯ ಪೆÇನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದ ಕಾನೂರು ರಸ್ತೆಯಲ್ಲಿ ಕುಡಿತದ ಅಮಲಿನಲ್ಲಿದ ಪತಿಯು ಹೆಂಡತಿಯೊಂದಿಗೆ ಜಗಳವಾಡಿ ಮಕ್ಕಳನ್ನು ಮನೆಯೊಳಗೆ ಕೂಡಿ ಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದರಿಂದ ಮನೆಯಿಂದ ಹೊರಗೆ ಬರಲಾಗದೆ 6 ಜನ ಜೀವಂತವಾಗಿ ಸುಟ್ಟು ಭಸ್ಮವಾಗಿದ್ದು, ಬೆಂಕಿ ಹಚ್ಚಿ ಕುಟುಂಬವನ್ನು ಕೊಂದ ಕುಡುಕ ಪರಾರಿಯಾಗಿದ್ದಾನೆ.
ಪೆÇನ್ನಂಪೇಟೆಯ ಮುಗುಟಗೇರಿ ಗ್ರಾಮದ ಕಾನೂರು ರಸ್ತೆಯಲ್ಲಿರುವ ವಸಂತ ಎಂಬವರ ಲೈನ್ ಮನೆಯಲ್ಲಿ ಮಂಜು ವಾಸವಿದ್ದರು. ನಿನ್ನೆ ರಾತ್ರಿ ಆತ ಮನೆಗೆ ಬಂದಾಗ ಆತನ ಹೆಂಡತಿ ಬೇಬಿ ತನ್ನ ತಮ್ಮನ ಮನೆಗೆ ಹೋಗಿದ್ದಳು. ಆಕೆಯನ್ನು ಎಷ್ಟು ಕರೆದರೂ ಬರದಿದ್ದರಿಂದ ಕೋಪಗೊಂಡ ಈತ ಜಗಳವಾಡಿದ್ದ. ಈ ಜಗಳ ತಾರಕಕ್ಕೇರಿ ಕೋಪದಿಂದ ಭೋಜ ಮನೆಯಿಂದ ರಾತ್ರಿಯೇ ಹೊರಗೆ ಹೋಗಿ, ಮನೆಯ ಬಾಗಿಲಿಗೆ ಹೊರಗಿನಿಂದ ಬೀಗ ಹಾಕಿ ತನ್ನದೇ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಈ ಅನಿರೀಕ್ಷಿತ ಬೆಂಕಿ ಕೆನ್ನಾಲಗೆಗೆ ಸಿಲುಕಿದ ಸೀತಾ (45), ಬೇಬಿ(40), ಪ್ರಾರ್ಥನಾ(6) ಮೂವರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಇನ್ನು ಮೂವರನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೂವರು ಸಹ ಸಾವನ್ನಪ್ಪಿದ್ದಾರೆ. ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೆÇನ್ನಂಪೇಟೆ ಪೆÇಲೀಸರು ಪರಾರಿಯಾಗಿರುವ ಭೋಜನಿಗಾಗಿ ಶೋಧ ನಡೆಸುತ್ತಿದ್ದಾರೆ.