
ಮುನವಳ್ಳಿ,ಮಾ3 : ಕಟಕೋಳ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆ ಸಮಿತಿಯವರಿಂದ ಮಾ.7 ರಂದು ಶ್ರೀ ವೀರಭದ್ರಶಿವಯೋಗಿ ಶಿವಾಚಾರ್ಯ ಶ್ರೀಗಳು, ಶ್ರೀ ಸಚ್ಛಿದಾನಂದ ಶ್ರೀಗಳು, ಶ್ರೀ ನಾಗಭೂಷಣ ಶ್ರೀಗಳ ಸಾನಿಧ್ಯದಲ್ಲಿ 6ನೇ ವರ್ಷದ ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆಯನ್ನು ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ದಿ.7 ರಂದು ಸಂಜೆ 5 ಗಂಟೆಗೆ ಸಕಲ ವಾದ್ಯಮೇಳಗಳೊಂದಿಗೆ ಕಂಬಿ ಹೊರಟು ಕುಮಾರೇಶ್ವರ ಮಠ ತಲುಪಿ ಅಲ್ಲಿಂದ ಚಿನ್ನಪ್ಪ ಪಟ್ಟಣಶೆಟ್ಟಿಯವರ ತೋಟ ಗೊಡಚಿ ರಾಮು ಅಜ್ಜನವರ ದೇವಸ್ಥಾನದಲ್ಲಿ ಬಸಯ್ಯಾ ಮಠಪತಿ ಇವರಿಂದ ಮಹಾಪ್ರಸಾದ ಮತ್ತು ವಾಸ್ತವ್ಯ ನಡೆಯಲಿದೆ.
ದಿ.8 ರಂದು ಗೊಡಚಿಯಿಂದ ಹೊರಟು ಸಾಲಹಳ್ಳಿ, ಲೋಕಾಪೂರ, ಕಲಾದಗಿ ಮಾರ್ಗವಾಗಿ ತುಳಸಿಗೇರಿ ವಾಸ್ತವ್ಯ,
ದಿ.9 ರಂದು ತುಳಸಿಗೇರಿಯಿಂದ ಹೊರಟು ಗದ್ದನಕೇರಿ ಕ್ರಾಸ ಮಾರ್ಗವಾಗಿ ಬಾಗಲಕೋಟ, ಕಮತಗಿಯಲ್ಲಿ ಪ್ರಸಾದ ಹಾಗೂ ವಾಸ್ತವ್ಯ, ದಿ.10 ರಂದು ಕಮತಗಿಯಿಂದ ಹೊರಟು ಅಮೀನಗಡ ಮಾರ್ಗವಾಗಿ ಕರಡಿಯಲ್ಲಿ ಪ್ರಸಾದ ವಾಸ್ತವ್ಯ,
ದಿ.11 ರಂದು ಕರಡಿಯಿಂದ ಹೊರಟು ಕೊಮ್ಮನೂರ ಮಾರ್ಗವಾಗಿ ಮುದಗಲ್ಲದಲ್ಲಿ ಪ್ರಸಾದ ವಾಸ್ತವ್ಯ, ದಿ.12 ರಂದು ಮುದಗಲ್ಲದಿಂದ ಹೊರಟು ಸುಲ್ತಾನಪೂರ ಮಾರ್ಗವಾಗಿ ಬಳಗಾನೂರದಲ್ಲಿ ಪ್ರಸಾದ ವಾಸ್ತವ್ಯ,
ದಿ.13 ರಂದು ಬಳಗಾನೂರ ಹೊರಟು ಜಾಲವಾಡಗಿ ಮೂಲಕ ಯಾಪಲಪರವಿ, ವಲಕಲದಿನ್ನಿ, ಪಣ್ಣೂರದಿಂದ ತುಂಗಭದ್ರಾ ನದಿ ದಾಟಿ ಆಂದ್ರಪ್ರದೇಶಕ್ಕೆ ಪ್ರವೇಶ ಕಂಬಳೂರ ಹಾಲವಿಯಲ್ಲಿ ಪ್ರಸಾದ ವಾಸ್ತವ್ಯ, ದಿ.14 ರಂದು ಹಾಲವಿಯಿಂದ ಹೊರಟು ಕೊಸಗಿ ಮಾರ್ಗವಾಗಿ ದಡ್ಡಿಬೆಳಗಲ, ಚಿಲಕಲಡೋಣಿ ನಂದಾವರಂದಲ್ಲಿ ಪ್ರಸಾದ ವಾಸ್ತವ್ಯ,
ದಿ.15 ರಂದು ನಂದಾವರದಿಂದ ಕೆಂಪಾಡು, ಕರ್ನುಲ್ ಮೇನ ರೋಡ ಮೂಲಕ ರೇಮಟಾದಲ್ಲಿ ಪ್ರಸಾದ ವಾಸ್ತವ್ಯ,
ದಿ.16 ರಂದು ರೇಮಟಾದಿಂದ ಜ್ವಾಲಾಪೂರ, ಮೂಲಕ ಬ್ರಾಹ್ಮಣ ಕೊಟ್ಟುರಿನಲ್ಲಿ ಪ್ರಸಾದ ವಾಸ್ತವ್ಯ, ದಿ.17 ರಂದು ಬ್ರಾಹ್ಮಣ ಕೊಟ್ಟುರಿನಿಂದ ಹೊರಟು ಜೂವಾಡ ಮಾರ್ಗವಾಗಿ ಪಾಮನಪಾಡು, ಡುಂಡ್ಯಾಲ ಆತ್ಮಕುರಂ ಪ್ರಸಾದ ವಾಸ್ತವ್ಯ,
ದಿ.18 ರಂದು ಆತ್ಮಕುರಂ ನಿಂದ ವೇಂಕಟಾಪೂರ ಮಾರ್ಗವಾಗಿ ಹೇಮ್ಮರಡ್ಡಿ ಮಲ್ಲಮ್ಮನ ರವರೂರು ಶಿದ್ದಾಪೂರ ಮಾರ್ಗವಾಗಿ ಗಂಗನಪಾಳ್ಯದಲ್ಲಿ ಪ್ರಸಾದ ವಾಸ್ತವ್ಯ,
ದಿ.19 ರಂದು ಗಂಗನಪಾಳ್ಯದಿಂದ ಹೊರಟು ಭೀಮನಕೋಳ್ಳ ಮಾರ್ಗವಾಗಿ ಕೈಲಾಸಬಾಗಿಲದಿಂದ ಸ್ವಂತದಾನದರ್ಮ ಬಿರುದಾವಳಿ ಹಾಕಿ ಅಡಿಕೇಶ್ವರ ಸಾಕ್ಷಿ, ಶ್ರೀ ಗಣೇಶನ ದರ್ಶನ ಪಡೆದ ನಂತರ ಶ್ರೀಶೈಲ ಮಲ್ಲಿಕಾರ್ಜುನ ದರ್ಶನ ಪಡೆದುಕೊಳ್ಳುವದು.
ಮಾರ್ಗದಲ್ಲಿ ಬರುವ ಎಲ್ಲ ಗ್ರಾಮ ಪಟ್ಟಣದಲ್ಲಿ ಭಕ್ತರ ಪ್ರಸಾದ, ಅಲ್ಪೋಪಹಾರ, ತಂಪಾದ ಪಾನಿಯ, ವೈಧ್ಯರ ವ್ಯವಸ್ಥೆ ಇರುವದು ಹಾಗೂ ಕಂಬಿಯಲ್ಲಿ ಪಾಲ್ಗೊಳ್ಳಲು ಮೊ: 8867253382 ಅಯ್ಯಪ್ಪ ಮಠಪತಿ, 9448189633 ಕಲ್ಲಪ್ಪ ಹುದ್ದಾರ ಸಂಪರ್ಕಿಸಿರಿ ಎಂದು ಶ್ರೀಶೈಲ ಪಾದಯಾತ್ರಾ ಸೇವಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿರುವರು.