6 ತಾಸು ರಸ್ತೆಯಲ್ಲಿಯೇ ಶವ
ತಹಸಿಲ್ದಾರ್ ಮಧ್ಯಸ್ಥಿಕೆಯಿಂದ ಅಂತ್ಯ ಸಂಸ್ಕಾರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.04: ನಗರದ ಎಪಿಎಂಸಿ  ಹತ್ತಿರ ಇರುವ ಖಟಿಕ್ ಸಮಾಜದ ರುದ್ರಭೂಮಿಯಲ್ಲಿ ಶವ ಸಂಸ್ಕಾರಕ್ಕೆ ಹಲವರು ಅಡ್ಡಿ ಪಡಿಸಿದ್ದರಿಂದ ನಿನ್ನೆ ಆರು ತಾಸು ರಸ್ತೆಯಲ್ಲಿಯೇ ಶವ ಇಟ್ಟು ನಂತರ ತಹಸಿಲ್ದಾರ್ ಮಧ್ಯಸ್ಥಿಕೆಯಲ್ಲಿ ಶವ ಸಂಸ್ಕಾರ ಮಾಡಿದ ಘಟನೆ ನಡೆದಿದೆ.
ಹಲವು ದಶಕಗಳಿಂದಲೂ ಇಲ್ಲಿ ಶವ ಸಂಸ್ಕಾರ ಮಾಡುತ್ತಾ ಬಂದಿದ್ದಾರೆ ಖಟಿಕ್ ಸಮಾಜ. ಆದರೆ ಈ ಸ್ಮಶಾನವನ್ನು ದಾಖಲೆಗಳ‌ ಮೂಲಕ ಹಲವರು ತಮ್ಮ‌ ಹೆಸರಿಗೆ ಮಾಡಿಸಿಕೊಂಡಿರುವುದೇ ಈಗ ಸಮಸ್ಯೆ ಆಗಿದೆ.  ದಾಖಲೆಗಳು ನಕಲಿ ಎಂದು ಖಾಟಿಕ ಸಮಾಜ ನ್ಯಾಯಾಲಯದ ಮೊರೆ ಹೋಗಿದೆ. ಸಧ್ಯ ಹೈಕೋಟಿನಲ್ಲಿ ದಾವೆ ಇದೆ.
ಇಂತಹ ಸಂದರ್ಭದಲ್ಲಿ ನಿನ್ನೆ ಮೃತಪಟ್ಟ ಮಹಿಳೆಯ ಶವ ಸಂಸ್ಕಾರ ಕ್ಕೆ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಬಂದಾಗ ಮಲ್ಲಿಕಾರ್ಜುನ , ಆನಂದ್ , ಮತ್ತು ಜಾವಿದ್ ಅವರ ಸಹಚರರು ಅಡ್ಡಿ ಮಾಡಿದ್ದಾರೆ.
ಇದರಿಂದ ಶವವನ್ನು ರಸ್ತೆಯಲ್ಲಿಯೇ ಇಟ್ಟು ಪೊಲೀಸ್ ಮತ್ತು ಕಂದಾಯ ಇಲಾಖೆಗಳ ಮೊರೆ ಹೋಗಿದ್ದಾರೆ. ಸಂಜೆ ಆರು ಗಂಟೆ ನಂತರ ಸ್ಥಳಕ್ಕೆ ಪೊಲೀಸರು, ತಹಸಿಲ್ದಾರ್ ವಿಶ್ವನಾಥ್, ಪಾಲಿಜೆ ಆಯುಕ್ತ ರುದ್ರೇಶ್ ಅವರು ಬಂದು, ಅಡ್ಡಿ ಪಡಿಸುವವರಿಗೆ ಪ್ರಕರಣ ನ್ಯಸಯಾಲಯಾದಲ್ಲಿ ಇರುವುದರಿಂದ ಶವ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲು ಸೂಚಿಸಿದ್ದಾರೆ ಅದಕ್ಕೆ ಒಪ್ಪದಿದ್ದಾಗ ಕಾನೂನಿನ ಎಚ್ಚರಿಕೆ ನೀಡಿ ಶವ ಸಂಸ್ಕಾರ ನಡೆಸಲು ಅವಕಾಶ ಕಲ್ಪಿಸಿದರಂತೆ.
ಖಾಟಿಕ್ ಸಮಾಜದ ಮುಖಂಡ ಉಗಮ‌ರಾವ್ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿ ಭೂಗಳ್ಳರು ನಡೆಸುವ ದೌರ್ಜನ್ಯವೇ ಹೆಚ್ಚಾಗಿದೆ ಎಂದಿದ್ದಾರೆ.