6 ಜನ ಚಿತ್ರ ಕಲಾವಿದರಿಗೆ ದೃಶ್ಯ ಬೆಳಕು ಪ್ರಶಸ್ತಿಹಿರಿಯ ಚಿತ್ರ ಕಲಾವಿದ ಜಾನೆಗೆ ದೃಶ್ಯ ಬೆಳಕು ಗೌರವ ಪುರಸ್ಕಾರ

ಕಲಬುರಗಿ,ನ.22-ನಗರದ ದೃಶ್ಯಬೆಳಕು ಸಾಂಸ್ಕøತಿಕ ಸಂಸ್ಥೆಯು ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ತನ್ನ 9ನೇ ವಾರ್ಷಿಕೋತ್ಸವವನ್ನು ವಿನೂತನವಾಗಿ ಆಚರಿಸುವ ಉದ್ದೇಶದಿಂದ ನ.25, 26, ಮತ್ತು 27 ರಂದು ನಗರದ ರಂಗಾಯಣದ ಕಲಾಗ್ಯಾಲರಿಯಲ್ಲಿ ರಾಷ್ರ್ಟಮಟ್ಟದ ಕಲಾ ಪ್ರದರ್ಶನ, ರಾಷ್ರ್ಟಮಟ್ಟದ ಕಲಾ ಶಿಬಿರ, ದೃಶ್ಯೋಪನ್ಯಾಸ, ರಾಷ್ರ್ಟಮಟ್ಟದ ದೃಶ್ಯಬೆಳಕು ಗೌರವ ಪುರಸ್ಕಾರ ಮತ್ತು ರಾಷ್ರ್ಟಮಟ್ಟದ ದೃಶ್ಯಬೆಳಕು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ದೃಶ್ಯ ಬೆಳಕು ಸಾಂಸ್ಕøತಿಕ ಸಂಸ್ಥೆ ಅಧ್ಯಕ್ಷ ಡಾ.ಪರಶುರಾಮ ಪಿ.ಅವರು, ನ.25, 26 ಮತ್ತು 27 ರಂದು ಏರ್ಪಡಿಸಲಾದ ರಾಷ್ರ್ಟಮಟ್ಟದ ಕಲಾ ಪ್ರದರ್ಶನದಲ್ಲಿ ಕರ್ನಾಟಕ ರಾಜ್ಯದ ಅಲ್ಲದೆ ದೇಶದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ 75ಕ್ಕೂ ಹೆಚ್ಚು ಕಲಾವಿದರ ಚಿತ್ರ-ಶಿಲ್ಪ ಮತ್ತು ಛಾಯಾಚಿತ್ರಗಳು ಬೆಳಿಗ್ಗೆ 10.00 ರಿಂದ ಸಂಜೆ 5.30ರ ವರೆಗೆ ಪ್ರದರ್ಶನಗೊಳ್ಳಲಿವೆ. ನ.25 ರಂದು ಬೆಳಿಗ್ಗೆ 10.30 ಗಂಟೆಗೆ ಹಿರಿಯ ಕಲಾವಿದರಾದ ಬಸವರಾಜ ರೇ ಉಪ್ಪಿನ ಅವರು ಕಲಾಪ್ರದರ್ಶನವನ್ನು ಉದ್ಘಾಟಿಸುವರು. ಹಿರಿಯ ಲೇಖಕ ಸೂರ್ಯಕಾಂತ ಸೊನ್ನದ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಇದೆ ಸಂದರ್ಭದಲ್ಲಿ ಮೂರು ದಿನಗಳ ರಾಷ್ರ್ಟಮಟ್ಟದ ಕಲಾಶಿಬಿರವನ್ನು ಹಮ್ಮಿಕೊಂಡಿದ್ದು, ಕಲಾಶಿಬಿರದ ಉದ್ಘಾಟನೆಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕÀ ಕೆ.ಎಚ್.ಚನ್ನೂರ ಅವರು ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಡಾ.ಹಣಮಂತರಾಯ ದೊಡ್ಡಮನಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ದೃಶ್ಯಬೆಳಕು ಸಾಂಸ್ಕøತಿಕ ಸಂಸ್ಥೆಯ ಕಾರ್ಯದರ್ಶಿ ನಯನಾ ಬಾಬುರಾವ್ ಅವರು ಶಿಬಿರದ ಸಂಚಾಲಕತ್ವನ್ನು ವಹಿಸಲಿದ್ದಾರೆ. ಶಿಬಿರದಲ್ಲಿ ರಾಜ್ಯ ಮತ್ತು ನೆರೆ ರಾಜ್ಯದ ಕಲಾವಿದರು ಭಾಗವಹಿಸಿ ತಲಾ ಒಂದು ಕಲಾಕೃತಿ ರಚಿಸಲಿದ್ದಾರೆ ಎಂದು ತಿಳಿಸಿದರು.
ದೃಶೋಪನ್ಯಾಸ ಮತ್ತು ಸಂವಾದ
ನ.27ರಂದು ಬೆಳಿಗ್ಗೆ 11:30ಕ್ಕೆ ದೃಶೋಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಹಿರಿಯ ದೃಶ್ಯಕಲಾ ಇತಿಹಾಸಕಾರ ಡಾ. ಆರ್. ಎಚ್. ಕುಲಕರ್ಣಿ ಅವರು ‘ಕರ್ನಾಟಕದಲ್ಲಿ ದೃಶ್ಯಕಲಾ ಸಂಶೋಧನೆಯ ಆಯಾಮಗಳು ಮತ್ತು ಸಾಧ್ಯತೆಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ ದೃಶ್ಯ ಬೆಳಕು ಸಾಂಸ್ಕøತಿಕ ಸಂಸ್ಥೆಯು ಅಧ್ಯಕ್ಷ ಡಾ. ಪರಶುರಾಮ್ ಪಿ ಅವರ ಅಧ್ಯಕ್ಷತೆ ವಹಿಸಲಿದ್ದಾರೆ ಪರಶುರಾಮ ತಿಳಿಸಿದರು.
ದೃಶ್ಯಬೆಳಕು ಗೌರವ ಪುರಸ್ಕಾರ
ದೃಶ್ಯಬೆಳಕು ಸಾಂಸ್ಕøತಿಕ ಸಂಸ್ಥೆಯು 2022ನೇ ಸಾಲಿನ ‘ದೃಶ್ಯಬೆಳಕು ಗೌರವ ಪುರಸ್ಕಾರ’ಕ್ಕೆ ನಾಡಿನ ಹೆಸರಾಂತ ಖ್ಯಾತ ಚಿತ್ರಕಲಾವಿದ ಬಸವರಾಜ ಎಲ್. ಜಾನೆ ಅವರನ್ನು ಆಯ್ಕೆ ಮಾಡಲಾಗಿದೆ. ದೃಶ್ಯಬೆಳಕು ಗೌರವ ಪುರಸ್ಕಾರವು 5,000/- ರೂ.ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣೆಕೆಯನ್ನು ಒಳಗೊಂಡಿರುತ್ತದೆ. ಜಾನೆ ಅವರು ದೃಶ್ಯಕಲಾ ಕ್ಷೇತ್ರದಲ್ಲಿ ಸಲ್ಲಿಸಿದ್ದ ಸೇವೆಯನ್ನು ಪರಿಗಣಿಸಿ 2022ನೆಯ ಸಾಲಿನ ‘ದೃಶ್ಯಬೆಳಕು ಗೌರವ ಪುರಸ್ಕಾರವನ್ನು ನೀಡಿ ಗೌರವಿಸಲಾಗುತ್ತದೆ ಎಂದು ಅವರು ತಿಳಿಸಿದರು.
ದೃಶ್ಯಬೆಳಕು ಪ್ರಶಸ್ತಿ
ದೃಶ್ಯಬೆಳಕು ಸಾಂಸ್ಕøತಿಕ ಸಂಸ್ಥೆಯ 9ನೇ ರಾಷ್ರ್ಟಮಟ್ಟದ ವಾರ್ಷಿಕ ಕಲಾಸ್ಪರ್ಧೆ ಏರ್ಪಡಿಸಿ, ಕಲಾಸ್ಪರ್ಧೆಯಲ್ಲಿ ವಿಜೇತರಾದ ಆರು ಜನ ಚಿತ್ರ-ಶಿಲ್ಪ ಮತ್ತು ಛಾಯಾಚಿತ್ರ ಕಲಾವಿದರಿಗೆ ‘ದೃಶ್ಯಬೆಳಕು’ ಪ್ರಶಸ್ತಿ ನೀಡುತ್ತದೆ. ದೃಶ್ಯಬೆಳಕು ಪ್ರಶಸ್ತಿಯು 5,000/- ರೂ.ಗಳ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ. ಈ ಸಾಲಿನ 9ನೆಯ ವಾರ್ಷಿಕ ‘ದೃಶ್ಯಬೆಳಕು’ ಪ್ರಶಸಿಗೆ ಮಧುಸೂದನ್ ಎಸ್ (ಚಾಮರಾಜನಗರ), ಸೂರ್ಯಕಾಂತ ನಂದೂರ (ಕಲಬುರಗಿ), ಜಾಸ್ಮಿನ ಕೌರ್ (ನವ ದೆಹಲಿ), ಗಾಯತ್ರಿ ಮಂತ (ಯಾದಗಿರಿ), ಅಜಯಕುಮಾರ ಕಲ್ಲಗುಡಿ (ಬಾಗಲಕೋಟೆ), ಹಣಮಂತ ಹರ್ಲಾಪುರ (ಕೊಪ್ಪಳ) ಅವರು ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ನ.27 ರಂದು ಮಧ್ಯಾಹ್ನ 03:00 ಗಂಟೆಗೆ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕಲಬುರಗಿಯ ದಕ್ಷಿಣ ಮತಕ್ಷೇತ್ರದ ಶಾಸಕರು ಮತ್ತು ಕಲ್ಯಾಣ ಕರ್ನಾಟಕ ಅಭಿವೃಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರಿಯ ದೃಶ್ಯಕಲಾ ಇತಿಹಾಸಕಾರ ಡಾ. ಆರ್. ಎಚ್. ಕುಲಕರ್ಣಿ ಮತ್ತು ಕಲಬುರಗಿ ರಂಗಾಯಣದ ನಿರ್ದೇಶಕರಾದ ಶ್ರೀ ಪ್ರಭಾಕರ್ ಜೋಶಿ ಅವರು ಭಾಗವಹಿಸುವರು. ನಗರದ ಹಿರಿಯ ಚಿತ್ರಕಲಾವಿದರಾದ ನಾಡೋಜ ಡಾ. ಜೆ. ಎಸ್. ಖಂಡೇರಾವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.