(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.22: ಗ್ರಾಮೀಣ ಠಾಣೆಯ ಪೊಲೀಸರು 6 ಜನ ಕಳ್ಳರನ್ನು ಬಂಧಿಸಿ ಅವರಿಂದ 22 ಲಕ್ಷ ರೂ ಮೌಲ್ಯದ 31 ಕೆ.ಜಿ. ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ.
ಕೃಷ್ಣ, ಪಂಪನಗೌಡ, ಎಂ.ಪುನಿತ್ ಕುಮಾರ್, ಶಿವರಾಜ, ನಾಗರಾಜ ಮತ್ತು ಟಿ.ಯೋಗೀಶ್ ಬಂಧಿತರು.
ಮೂರು ದಿನಗಳ ಹಿಂದೆ ಚಂದ್ರಕಾಂತ್ ಸೋನಿ ಎಂಬುವವರು ದೂರು ನೀಡಿದ್ದರು. ದೂರಿನನ್ವಯ ಸಾಕ್ಷಿಗಳನ್ನಿಟ್ಟುಕೊಂಡು ಕಾರ್ಯಾಚರಣೆಗಿಳಿದ ಪೊಲೀಸರು ಕೇವಲ ನಾಲ್ಕು ದಿನಗಳ ಅವಧಿಯಲ್ಲಿ ಕಳ್ಳರನ್ನು ಬಂಧಿಸಿ, ಕದ್ದಿದ್ದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಸಿಪಿಐ ನಿರಂಜನ ನೇತೃತ್ವದಲ್ಲಿ ಸಿಬ್ಬಂದಿಗಳಾದ ಖಾಜಾಮೊಯಿದ್ದೀನ್, ಶ್ರೀನಿವಾಸ್, ಸುಧಾಕರ್, ಯೂ ಕೆ.ಬೀರಪ್ಪ, ರಮೇಶಬಾಬು, ಮಂಜುನಾಥ, ಗಂಗೂಲಿ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
One attachment • Scanned by Gmail