6ರಿಂದ 12ನೇ ತರಗತಿವರೆಗೆ ಶೇ.100ರಷ್ಟು ಹಾಜರಾತಿ

ಬೆಂಗಳೂರು, ಸೆ.24- ವಾರದ ಐದು ದಿನಗಳ ಕಾಲ 6ರಿಂದ 12ನೇ ತರಗತಿವರೆಗೆ ಶಾಲೆ, ಕಾಲೇಜುಗಳಲ್ಲಿ ಶೇ.100ರಷ್ಟು ಹಾಜರಾತಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ನಾಳೆ ಮತ್ತು ಭಾನುವಾರದಂದು ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತದೆ. ಕೋವಿಡ್ 19 ತಜ್ಞರ ಸಲಹೆ, ಸೂಚನೆಯಂತೆ ಕೋವಿಡ್-19 ಪಾಸಿಟಿವಿಟಿ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶೇ.100ರಷ್ಟು ಹಾಜರಾತಿಯೊಂದಿಗೆ ಶಾಲೆ, ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿವೆ.

ವಿದ್ಯಾರ್ಥಿಗಳು, ಶಿಕ್ಷಕರು, ಬೋಧಕೇತರ ಸಿಬ್ಬಂದಿ ಹಾಗೂ ಶಾಲಾ, ಕಾಲೇಜುಗಳ ಆಡಳಿತ ಮಂಡಳಿಗಳ ಸಹಕಾರ, ಕೋವಿಡ್-19 ಸುರಕ್ಷತಾ ನಿಯಮಗಳ ಪಾಲನೆ, ಯಶಸ್ವಿ ಕೋವಿಡ್-19 ಲಸಿಕೆ ಅಭಿಯಾನದಿಂದ ಕೋವಿಡ್-19 ಮೂರನೇ ಅಲೆಯ ಭೀತಿ ಕಡಿಮೆ ಆಗಿದೆ. ಈ ಹಿನ್ನೆಲೆಯಲ್ಲಿ 6ರಿಂದ 12ನೇ ವರ್ಗದವರೆಗಿನ ತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಅನುಮತಿ ನೀಡಲಾಗಿದೆ.