6ರಂದು ತಾಳಿಕೋಟೆ ಶ್ರೀ ಮಾರುತೇಶ್ವರ ನವರಥ ಲೋಕಾರ್ಪಣೆ

ತಾಳಿಕೋಟೆ:ಎ.4: ಸುಕ್ಷೇತ್ರ ತಾಳಿಕೋಟೆ ಪಟ್ಟಣದ ಆಶ್ರೆಯ ಬಡಾವಣೆಯಲ್ಲಿಯ ಶ್ರೀ ಮಾರುತೇಶ್ವರ 14 ನೇ ವರ್ಷದ ಜಯಂತ್ಯೋತ್ಸವ ಹಾಗೂ ನೂತನ ರಥೋತ್ಸವವು ಇದೇ ದಿ.5 ಮತ್ತು 6ರಂದು ವಿಜೃಂಭಣೆಯಿಂದ ಜರುಗಲಿದೆ.

  ದಿನಾಂಕ 5 ಬುಧುವಾರರಂದು ನವರಥ ಕುರಿತು ಮಹಾ ಹೋಮ ಹವನ ಪೂಜಾ ಕಾರ್ಯಕ್ರಮ ಜರುಗುವುದಲ್ಲದೆ ಶಿವಭಜನೆಯೊಂದಿಗೆ ಸುಮಂಗಲೆಯರಿಂದ ಕುಂಭಮೇಳದೊಂದಿಗೆ ಗಂಗಸ್ಥಳ ಜರುಗುವುದು. ಈ ಹೋಮ ಹವನ ಹಾಗೂ ಪೂಜಾ ಕಾರ್ಯಕ್ರಮವನ್ನು ವೇ. ಸಂತೋಷ ಭಟ್ಟ್ ಜೋಷಿ ಹಾಗೂ ಅವರ ಸಂಸ್ಕøತ ಪಾಠಶಾಲೆಯ ವಿದ್ಯಾರ್ಥೀಗಳು ನಡೆಸಿಕೊಡುವರು.
  ದಿನಾಂಕ 6 ಗುರುವಾರರಂದು ಶ್ರೀ ಮಾರುತೇಶ್ವರ ಮಂದಿರದಲ್ಲಿ ಮಹಾಹೋಮ ಹವನ ಕಾರ್ಯಕ್ರಮ ನಡೆಯುವುದಲ್ಲದೆ ಪುರವಂತರ ಸೇವೆಯೊಂದಿಗೆ ಪಲ್ಲಕಿ ಉತ್ಸವ ನೂತನ ತೇರಿನ ಕಳಸದ ಮೆರವಣಿಗೆಯು ವಿವಿಧ ವಾದ್ಯ ವೈಭವಗಳೊಂದಿಗೆ ಜರುಗುವುದು.
  ಮಧ್ಯಾಹ್ನ 2ಘಂಟೆಗೆ ಧರ್ಮಸಭೆ ಜರುಗಲಿದ್ದು ಈ ಸಬೆಯ ದಿವ್ಯ ಸಾನಿಧ್ಯವನ್ನು ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಹಾಗೂ ಹಿರೂರ ಅನ್ನದಾನೇಶ್ವರ ಮಠದ ಶ್ರೀ ಷ.ಬ್ರ.ಜೈಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಗುಂಡಕನಾಳ ಬ್ರಹನ್ಮಠದ ಶ್ರೀ ಷ. ಬ್ರ.ಗುರುಲಿಂಗ ಶೀವಾಚಾರ್ಯರು ವಹಿಸುವರು.
  ಉದ್ಘಾಟಕರಾಗಿ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಅಧ್ಯಕ್ಷರು ಹಾಗೂ ಮುದ್ದೇಬಿಹಾಳ ಮತಕ್ಷೇತ್ರ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಆಗಮಿಸುವರು.
   ಅಧ್ಯಕ್ಷತೆಯನ್ನು ವೇ|| ಗುರುಶಾಂತಯ್ಯ ಎಸ ಹಿರೇಮಠ, ವೇ|| ಎಸ.ಎಮ.ಬೇನಾಳಮಠ, ನಿವೃತ್ತ ಶಿಕ್ಷಕ ಅವರು ವಹಿಸುವರು.
  ಮುಖ್ಯ ಅಥಿತಿಗಳಾಗಿ ಮಾಜಿ ಜಿ.ಪಂ. ಸದಸ್ಯ ಬಸವನಗೌಡ ವಣಕ್ಯಾಳ ಅವರು ಹಾಗೂ ಪುರಸಭೆಯ ಅಧ್ಯಕ್ಷ ಸಂಗಮೇಶ ಇಂಗಳಗಿ ಅವರು ಆಗಮಿಸುವರು.
  ಅಥಿತಿಗಳಾಗಿ ತಾಳಿಕೋಟೆಯ ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ ಹಾಗೂ ಬ.ಸಾಲವಾಡಗಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎಸ್.ಎಸ್.ಗಡೇದ, ಶಿಕ್ಷಕರಾದÀ ದೇವರಾಜ ಬಾಗೆವಾಡಿ, ಪ್ರಕಾಶ ಕಟ್ಟಿಮನಿ, ಹಾಗೂ ರಥದ ಶಿಲ್ಪಿಗಳಾದ ಧಾರವಾಡ ಜಿಲ್ಲೆಯ ಮಳಲಿಯ ರವಿ ನಾಗಪ್ಪ ಬಡಿಗೇರ ಅವರು ಉಪಸ್ಥಿತರಿರುವರು.
  ಸಾಯಂಕಾಲ 5:15 ಘಂಟೆಗೆ ನೂತನ ಮಹಾ ರಥೋತ್ಸವ ಜರುಗುವುದು. ಸಾಯಂಕಾಲ 6:30 ಘಂಟೆಗೆ ಶ್ರೀ ಮಾರುತೇಶ್ವರವರ ತೊಟ್ಟಿಲು ಕಾರ್ಯಕ್ರಮ ಜರುಗುವುದಲ್ಲದೆ ಅಕ್ಕನ ಬಳಗದ ಸುಮಂಗಲೇಯರಿಂದ ಜೊಗುಳ ಪದಗಳು ಜರುತಲಿವೆ. ಕಾರಣ ತಾಳಿಕೋಟೆ ಪಟ್ಟಣ ಅಲ್ಲದೇ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಆಗಮಿಸಿ ಶ್ರೀ ಮಾರುತೇಶ್ವರರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಮಾರುತೇಶ್ವವರ ಸೇವಾ ಸಂಘದ ಪದಾಧಿಕಾರಿಗಳು ಹಾಗೂ ಗಜಾನನ ಮಂಡಳಿ, ಹನುಮಾನ ಸೇವಾ ಸಮಿತಿಯ ಪದಾಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.