6ನೇ ವೇತನ ಆಯೋಗ ಶಿಫಾರಸು ಸಾಧ್ಯವಿಲ್ಲ ಸವದಿ ಸ್ಪಷ್ಟನೆ

ಬೀದರ್, ಏ 11- ಸದ್ಯದ ಪರಿಸ್ಥಿತಿಯಲ್ಲಿ ‌ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ಸಂಬಳ ನೀಡಲು ಸಾಧ್ಯವಿಲ್ಲ ಎಂದು ಸಾರಿಗೆ ಸಚಿವರೂ ಆಗಿರುವ‌‌ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ‌ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಹುಮ್ನಾಬಾದ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನಿಗಮದ ನೌಕರರಿಗೆ ವೇತನ ಹೆಚ್ಚಿಸಿದರೆ ಇತರ ನಿಗಮಗಳ ನೌಕರರಿಗೂ ತಾರತಮ್ಯ ಮಾಡಿದಂತಾಗುತ್ತದೆ ಇದು ಸಂಘರ್ಷಕ್ಕೂ ಕಾರಣವಾಗಲಿದೆ ಎಂದರು.
ಸಿಬ್ಬಂದಿಗೆ ಇನ್ಸೆಂಟಿವ್, ಓಟಿ ಹಾಗೂ ಬಾಟಾ ನೀಡಲಾಗುತ್ತಿದೆ. ನೌಕರರು ಕೆಲಸಕ್ಕೆ ಹಾಜರಾದರೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಿ ನೌಕರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಅವರು ತಿಳಿಸಿದರು.
ತರಬೇತಿ ನೌಕರರಿಗೆ ಪ್ರತಿಭಟನೆ ಮಾಡುವ ಹಕ್ಕಿಲ್ಲ. ಕೆಲಸಕ್ಕೆ ಸೇರಿದ ಎರಡು ವರ್ಷಗಳ ಅವಧಿಯಲ್ಲಿ ಸರ್ಕಾರ ಅಥವಾ ಸಾಸಂಸ್ಥೆಯ ವಿರುದ್ಧ ಪ್ರತಿಭಟನೆ ನಡೆಸುವಂತಿಲ್ಲ
ರ್ವಜನಿಕರಿಗೆ ತೊಂದರೆ ಮಾಡಿ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ನ್ಯಾಯಾಲಯವೂ ಹೇಳಿದೆ. ಹೀಗಾಗಿ ಪ್ರತಿಯೊಬ್ಬರು ಕಾನೂನಿಗೆ ಗೌರವ ಕೊಡಬೇಕು ಎಂದು ಮನವಿ ಮಾಡಿದರು.