6ನೇ ವೇತನ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಮನವಿ

ಮುದ್ದೇಬಿಹಾಳ:ಎ.18: ಪಟ್ಟಣದ ಇಲ್ಲಿನ ಸಾರಿಗೆ ನೌಕರರ ಬೇಡಿಕೆಯಾದ 6ನೇ ವೇತನ ಆಯೋಗವನ್ನು ಜಾರಿ ಮಾಡುವ ಕುರಿತು ವಿಜಯಪುರ ಜಿ ಪಂ ಉಪಾಧ್ಯಕ್ಷರಾದ ಪ್ರಭುಗೌಡ ದೇಸಾಯಿ ಅವರಿಗೆ ತಾಲ್ಲೂಕಿನ ಸಾರಿಗೆ ನೌಕರರು ಬೇಟಿ ಮಾಡಿ ತಮ್ಮ ಮುಖಾಂತರ ಸಾರಿಗೆ ಸಚಿವ ಲಕ್ಷ್ಮಣ ಸವದೀ ಸಾಹೇಬರ ಗಮನಕ್ಕೆ ತರುವ ಮೂಲಕ ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಶುಕ್ರವಾರ ಮನವಿ ಮಾಡಿದರು

ಈ ಸಂದರ್ಭದಲ್ಲಿ ಪ್ರಭುಗೌಡ ದೇಸಾಯಿ ಅವರು ಮಾತನಾಡಿ ನಮಗೆಲ್ಲಾ ಪ್ರಯಾಣ ಎಂದರೆ ತಟ್ ಅಂಥ ನೆನಪಾಗುವುದು ಕ.ರಾ.ರ.ಸಾ.ನಿಗಮ, ಇದು ಜನರ ಜೀವನಾಡಿಯಾಗಿದೆ. ಸುರಕ್ಷತೆಯ ಹಾಗೂ ವಿಶ್ವಸಾರ್ಹತೆಯ ಪ್ರತೀಕವೆಂದು ನಾವೆಲ್ಲಾ ನಂಬಿದ್ದೇವೆ ಇದಕ್ಕೆ ಕಾರಣ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರಮಿಕ ವರ್ಗದ ಸಿಬ್ಬಂದಿಗಳ ಶ್ರಮ ಇದರಲ್ಲಿ ಅಡಗಿದೆ. ನಾವು ಬಸ್ ಹತ್ತಿ ಕುಳಿತು 10 ನಿಮಿಷದಲ್ಲಿ ಎಲ್ಲಾ ಚಿಂತೆ ಬಿಟ್ಟು ಮಲಗುತ್ತೇವೆ. ಇದಕ್ಕೆ ಕಾರಣ ನಾವು ತಲುಪಬೇಕಾದ ಸ್ಥಳಗಳಿಗೆ ಯಾವುದೇ ತೊಂದರೆ ಇಲ್ಲದೇ ನಮ್ಮನ್ನು ಕರೆದುಕೊಂಡು ಹೋಗುವ ಚಾಲಕರ ಮೇಲಿನ ಅಚಲ ನಂಬಿಕೆ. ಆದರೆ ಈಗ ಪ್ರಯಾಣಿಕರ ಸೇವಕರಾದ ಸಾರಿಗೆ ನೌಕರರ ಕಷ್ಟಕ್ಕೆ ಸ್ಪಂದಿಸಲು ಕೂಡಲೇ ಸಾರಿಗೆ ಸಚಿವರ ಗಮನಕ್ಕೆ ತಂದು ನಾಯ್ಯಯುತವಾದ ಬೇಡಿಕೆಯನ್ನು ಈಡೇರಿಸಲು ಮನವಿ ಮಾಡುತ್ತೇನೆ ಎಂದು ತಿಳಿಸಿದರು.