6ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಹಾಗೂ ಧನ್ವಂತರಿ ಜಯಂತಿ

ವಿಜಯಪುರ, ನ.4-ಆಯುಷ್ ಫೆಡರೇಶನ್ ಆಫ್ ಇಂಡಿಯಾ ವಿಜಯಪುರ ಘಟಕ ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣಗಳನು ಕಳೆದುಕೊಂಡ ಎಲ್ಲ ಕೋವಿಡ್ ವಾರಿಯರಗಳ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಹಾಗೂ ಕೋರೋನಾ ರೋಗವು ಜಗತ್ತಿನಂದ ಮುಕ್ತವಾಗಲಿ ಎಂದು ಧನ್ವಂತರಿ ಹೋಮವನ್ನು ನಗರದ ಕೃಷ್ಣ ಮಠ ಪಿ.ಡಿ.ಜೆ ಹೈಸ್ಕೂಲ್ ಹತ್ತಿರ ಹಮ್ಮಿಕೋಳಲಾಗಿತ್ತು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ (ತಾಲ್ಲೂಕಿನ ಸಹಿತ) ಹಿರಿಯ ಆಯುಷ್ ವೈದ್ಯರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಯುಷ್ ಫೆಡರೇಶನ್ ಆಫ್ ಇಂಡಿಯಾ ರಾಜ್ಯ ಘಟಕದ ಅಧ್ಯಕ್ಷರಾದ ಡಾ. ಮೋಹನ್ ಬಿರಾದಾರ್ ಅಂತರಾಷ್ಟ್ರೀಯ ಮಟ್ಟದಲ್ಲಿ ಆಯುರ್ವೇದದ ಮಹತ್ವ ಕುರಿತು ಮಾತನಾಡಿದರು,
ಇನ್ನೊಬ್ಬ ಮುಖ್ಯ ಅತಿಥಿ ಡಾ. ಆನಂದ ಕಿರಿಶ್ಯಾಳ ಅವರು ಶಿಕ್ಷಣದಲ್ಲಿ ಆಯುರ್ವೇದ ವೈದ್ಯಕೀಯ ವ್ಯಾಸಂಗ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಕುರಿತು ಮಾತನಾಡಿದರು.
ಜಿಲ್ಲಾ ಆಯುಷ್ ಫೆಡರೇಶನ್ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿಗಳು ಡಾ. ರಾಜೇಂದ್ರ ಸಂಕಣ್ಣವರ ಕಾರ್ಯಕ್ರಮದ ಉದ್ದೇಶ ಕುರಿತು ಧನ್ವಂತರಿ ಜಯಂತಿ ಮಹತ್ವ ಆರನೇ ಆಯುರ್ವೇದ ದಿವಸ ಮಹತ್ವದ ಕುರಿತು ಮಾತನಾಡಿದರು,
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಅರವಿಂದ ಡಾಣಕ ಶಿರೂರುರವರು ಕರೋನಾ ಸಂದರ್ಭದಲ್ಲಿ ಆಯುರ್ವೇದ ವೈದ್ಯರ ಸೇವೆಯ ಕುರಿತು ಮಾತನಾಡಿದರು, ಡಾ. ಚಂದ್ರಶೇಖರ್ ಕುಪ್ಪಿ ಅವರು ಸಂಘಟನೆಯ ಬಗ್ಗೆ ಮಾತನಾಡಿದರು.
ಡಾ. ಅಶೋಕ ವಾಲಿ ಗ್ರಾಮೀಣ ಪ್ರದೇಶದಲ್ಲಿ ಆಯುಷ ವೈದ್ಯರ ಸೇವೆಯ ಬಗ್ಗೆ ಸವಿವರವಾಗಿ ತಿಳಿಸಿದರು.
ಡಾ. ರೇಷ್ಮಾ ಕುಪ್ಪಿ ಅವರು ಹಿರಿಯ ವೈದ್ಯರಿಗೆ ಸನ್ಮಾನಿಸಿರುವುದನ್ನು ಶ್ಲಾಘಿಸಿದರುಈ ಸಂದರ್ಭದಲ್ಲಿ ಡಾ ಸಂಜು ಸೀಳಿನ ಕಾರ್ಯಕ್ರಮ ನಿರೂಪಿಸಿದರು. ಡಾ ಮಲ್ಲಿಕಾರ್ಜುನ್ ಭೂತನಾಳ ವಂದನಾರ್ಪಣೆ ಮಾಡಿದರು.
ಜಿಲ್ಲಾ ಆಯುಷ್ ಫೆಡರೇಶನ್ ಖಜಾಂಚಿ ಡಾ ರವಿ ಜಾಹಗಿರದಾರ ಉಪಾಧ್ಯಕ್ಷರು ಡಾ-ಬಿ ಬಿ ಪಾಟೀಲ್ ಹಿರಿಯ ವೈದ್ಯರಾದ ಡಾ. ಎಚ್. ವಿ ಕರಿಗೌಡರ, ಡಾ. ಜೆ. ಎಸ್. ಹಿರೇಮಠ, ಡಾ ಆರ್ ಎಸ್ ಪಾಟೀಲ, ನೀಲಕಂಠ ಮಂದರೂಪ, ಡಾ.ಗೀರಿಶ ಬಗಲಿ, ಡಾ. ಸಂಗಮೇಶ ಪಾಟೀಲ, ಡಾ. ವಾಸುದೇವ ಢಗೆ, ಡಾ. ಆರ್.ಎಸ್. ಪಾಟೀಲ, ಡಾ. ನಜೀರ ಪಟೇಲ, ಡಾ.ವಿಶ್ವನಾಥ ಪತ್ತಾರ, ಡಾ.ಬಿ.ಎನ್. ಮಾಲಿಪಾಟೀಲ, ಡಾ.ಬಾಬು ಕುಚನೂರ, ಡಾ. ಪ್ರವೀಣ ಚೌರ, ಡಾ. ಶಾರದಾ ಸಂಕಣ್ಣವರ, ಡಾ. ಸಂಗೀತಾ ಭೂತನಾಳ, ಡಾ., ರೂಪಾ ಮಂದರೂಪ, ಡಾ. ಅಶ್ವೀನಿ ಪಾಟೀಲ, ಡಾ. ರೇಣುಕಾ ಕಬಾಡೆ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.