6ಕೆಜಿ 500ಗ್ರಾಂ ಒಣಗಿದ ಗಾಂಜಾ ವಶ ವ್ಯಕ್ತಿ ಬಂಧನ

ಇಂಡಿ:ಮಾ.20: ತಾಲೂಕಿನ ಹಡಲಸಂಗ ಗ್ರಾಮದ ವಿಜಯನಗರ ತಾಂಡಾ ನಂ-2 ರಲ್ಲಿ ಇಂಡಿ ವಲಯದ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ 6ಕೆಜಿ 500ಗ್ರಾಂ ಒಣಗಿದ ಗಾಂಜಾ ಹಾಗೂ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಸುಮಾರು 97500ರೂ ಗಳೆಂದು ಅಂದಾಜಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಿದ್ದಾರೆ ಅಕ್ರಮವಾಗಿ ಸಂಗ್ರಹಿಸಿದ್ದ 6.5ಕೆಜಿ ಒಣಗಿದ ಗಾಂಜಾ ಹಾಗೂ ಗೇಮು ನಾಯಕ 40ವರ್ಷ ಎಂಬ ವ್ಯಕ್ತಿಯನ್ನು ಬಂಧಿಸುವಲ್ಲಿ ಅಬಕಾರಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಮಾನ್ಯ ಅಬಕಾರಿ ಅಪ್ಪರ ಆಯುಕ್ತರು ಅಫರಾದ ಕೇಂದ್ರಸ್ಥಾನ ಬೆಳಗಾವಿ, ಹಾಗೂ ಮಾನ್ಯ ಅಬಕಾರಿ ಜಂಟಿ ಆಯುಕ್ತರು ಬೆಳಗಾವಿ ವಿಭಾಗ ಬೆಳಗಾವಿ, ಹಾಗೂ ಮಾನ್ಯ ಅಬಕಾರಿ ಉಪ ಆಯುಕ್ತರು ವಿಜಯಪೂರ, ಮತ್ತು ಅಬಕಾರಿ ಉಪ ಆಧಿಕ್ಷಕರು ಉಪ ವಿಬಾಗ ವಿಜಯಪೂರ ಅವರ ಮಾರ್ಗದರ್ಶನದಲ್ಲಿ ಮಾನ್ಯ ತಹಶೀಲ್ದಾರ ಇಂಡಿ ಅವರ ನೇತ್ರತ್ವದಲಿ ಅಬಕಾರಿ ಉಪ ನೀರಿಕ್ಷಕರಾದ ವಿಜಯಕುಮಾರ ಹಿರೇಮಠ ಅವರ ಪಿರ್ಯಾದಿ ಮೇರೆಗೆ ಎಮ್ ಎಚ್ ಪಡಸಲಗಿ ಅಬಕಾರಿ ನೀರಿಕ್ಷಕರು ಇಂಡಿ ವಲಯ ಇವರು ಎಸ್,ಡಿ,ಪಿ,ಎಸ್, ಕಾಯ್ದೆಅಡಿ ಪ್ರಕರಣ ದಾಕಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ದಾಳಿಯಲ್ಲಿ ಪಾಲ್ಗೊಂಡ ಸಿಬ್ಬಂದಿಗಳಾದ ಶಿವಶಂಕರ ಗೋಟ್ಯಾಳ, ಸಂಜಯ ಕುಲಕರ್ಣಿ, ಸಂಜಯಕುಮಾರ ಹೂವಿನವರ, ಶಿವರುದ್ರ ದಳವಾಯಿ, ಮಂಜುನಾಥ ಬಡಿಗೇರ, ಈ ಸಿಬ್ಬಂದಿಗಳು ಬಾಗಿಯಾಗಿದ್ದರು.