ಕರ್ನಾಟಕ ಏಕತಾ ವೇದಿಕೆಯ ಕರುನಾಡ ಹಬ್ಬ; ಪುತ್ಥಳಿಗಳ ಸ್ವಚ್ಚತೆ

ದಾವಣಗೆರೆ. ನ.20;  ಕರ್ನಾಟಕ ಏಕತಾ ವೇದಿಕೆಯ ವತಿಯಿಂದ ಪ್ರಪ್ರಥಮ 67ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ರಥಮ ದಿನದ ನಗರದ ಮುಖ್ಯ ವೃತ್ತಗಳಲ್ಲಿರುವ ಮಹನೀಯರ ಪುತ್ಥಳಿಗಳ ಸ್ವಚ್ಛತಾ ಕಾರ್ಯವನ್ನು ವೇದಿಕೆಯ ರಾಜ್ಯಾಧ್ಯಕ್ಷರಾದ ಎನ್.ಹೆಚ್. ಹಾಲೇಶ್ ಹಾಗೂ ಜಿಲ್ಲಾ ಗೌರವಾಧ್ಯಕ್ಷರಾದ ಪ್ರಶಾಂತ್ (ಪಚ್ಚಿ) ಜಿಲ್ಲಾಧ್ಯಕ್ಷರಾದ ದೇವೇಂದ್ರಪ್ಪ ಆರ್. ಯುವ ಘಟಕದ ರಾಜ್ಯಾಧ್ಯಕ್ಷರಾದ ಮಂಜುನಾಯ್ಕ ಬಸಾಪುರ, ಒಬಿಸಿ ಮೋರ್ಚಾದ ಬಿಜೆಪಿ ಕೋಶಾಧ್ಯಕ್ಷರು ಆನಂದಪ್ಪ ಮತ್ತಿತರ ಗಣ್ಯವ್ಯಕ್ತಿಗಳ ಸಮ್ಮುಖದಲ್ಲಿ ದುಗ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಶಿವಾಜಿ ಮಹಾರಾಜರ ಪುತ್ಥಳಿ ಸ್ವಚ್ಛಗೊಳಿಸಿ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ನಂತರ ಹೊಂಡದ ಸರ್ಕಲ್‌ನಲ್ಲಿರುವ ವೀರ ಮದಕರಿ ನಾಯಕರ ಪುತ್ಥಳಿ ಸ್ವಚ್ಛಗೊಳಿಸಿ ವಿನಾಯಕ್ ಪೈಲ್ವಾನ್‌ರವರು ಮಾಲಾರ್ಪಣೆ ಮಾಡಿದರು. ನಂತರದಲ್ಲಿ ಕಾಯಿಪೇಟೆಯ ಶ್ರೀ ಬಸವೇಶ್ವರರ ಪುತ್ಥಳಿ ಸ್ವಚ್ಛಗೊಳಿಸಿ, ಜಿಲ್ಲಾ ಗೌರವಾಧ್ಯಕ್ಷರಾದ  ಪ್ರಶಾಂತ್ ಪಚ್ಚಿ ಮಾಲಾರ್ಪಣೆ ಮಾಡಿದರು. ನಂತರ ರಿಂಗ್ ರಸ್ತೆಯಲ್ಲಿರುವ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ಸ್ವಚ್ಛಗೊಳಿಸುವ ಮೂಲಕ ವೇದಿಕೆಯ ಯುವ ಘಟಕ ರಾಜ್ಯಾಧ್ಯಕ್ಷರಾದ ಮಂಜುನಾಯ್ಕ ಬಸಾಪುರ ಮಾಲಾರ್ಪಣೆ ಮಾಡಿದರು. ರೈಲ್ವೆ ನಿಲ್ದಾಣ ಮತ್ತು ಮಹಾನಗರ ಪಾಲಿಕೆಯ ಮುಂಭಾಗದ ಭಗತ್‌ಸಿಂಗ್ ಪುತ್ಥಳಿಯನ್ನು ಸ್ವಚ್ಛಗೊಳಿಸಿ ಜಿಲ್ಲಾಧ್ಯಕ್ಷರಾದ ದೇವೇಂದ್ರಪ್ಪ ಆರ್.ರವರು ಮಾಲಾರ್ಪಣೆ ಮಾಡಿದರು. ನಂತರ ಅಂಬೇಡ್ಕರ್ ಸರ್ಕಲ್‌ನ ಅಂಬೇಡ್ಕರ್ ಪುತ್ಥಳಿ ಸ್ವಚ್ಛಗೊಳಿಸಿ ವೇದಿಕೆಯ ಚಂದ್ರಶೇಖರ್ ವಿ., ಸಂತೋಷ್ ಪೈಲ್ವಾನ್, ನಿಂಗಣ್ಣ ಮತ್ತು ಹರೀಶ್ ಪವಾರ್‌ರವರು ಮಾಲಾರ್ಪಣೆ ಮೂಲಕ ಸ್ವಚ್ಛತಾ ಮತ್ತು ಮಾಲಾರ್ಪಣೆ ಕಾರ್ಯ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾದ ಕೋಶಾಧ್ಯಕ್ಷರಾದ ಆನಂದಪ್ಪನವರು ದೇಶಕ್ಕೆ ಭಾರತಾಂಬೆಯAತೆ ನಾಡಿಗೆ ಭುವನೇಶ್ವರಿ ತಾಯಿಯಾಗಿದ್ದಾರೆ. ಕರ್ನಾಟಕ ಏಕತಾ ವೇದಿಕೆಯಿಂದ ಇಂದು ದೇಶ ಮತ್ತು ನಾಡಿಗಾಗಿ ಹೋರಾಡಿದ ಶಿವಾಜಿ ಮಹಾರಾಜ್, ವೀರ ಮದಕರಿನಾಯP,À ವಾಲ್ಮೀಕಿ ಮಹರ್ಷಿ, ಸಂಗೊಳ್ಳಿರಾಯಣ್ಣ, ಜಗಜ್ಯೋತಿ ಬಸವೇಶ್ವರರು, ಸ್ವತಂತ್ರö್ಯ ಹೋರಾಟಗಾರರಾದ ಭಗತ್‌ಸಿಂಗ್ ಮತ್ತು ಭಾರತಕ್ಕೆ ಸಂವಿಧಾನ ತಂದುಕೊಟ್ಟ ಅಂಬೇಡ್ಕರ್‌ರವರನ್ನು ನೆನೆಯುವ ಮೂಲಕ ಮಹನೀಯರ ಗೌರವಿಸಿದ್ದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.