ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಧೀಮಂತ ಸನ್ಮಾನವನ್ನು ನೀಡಿ ಗೌರವಿಸುವ ಕಾರ್ಯಕ್ರಮದಲ್ಲಿ ಅನಾರೋಗ್ಯ ಕಾರಣದಿಂದ ಅನುಪಸ್ಥಿತರಾಗಿದ್ದ ಶಿಕ್ಷಣ ತಜ್ಞರಾದ ಸುರೇಶ ಕುಲಕರ್ಣಿ ಅವರ ನಿವಾಸಕ್ಕೆ ಹು-ಧಾ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ಭೇಟಿ ನೀಡಿ ಧೀಮಂತ ಸನ್ಮಾನ ನೀಡಿ ಗೌರವಿಸಿದರು. ಸುರೇಶ ಬೆದರೆ, ಮಂಜುನಾಥ ಬಟ್ಟೆನ್ನವರ, ಆರ್.ಎಂ. ಕುಲಕರ್ಣಿ, ವಿನಾಯಕ ಜೋಷಿ, ರಾಘು ಶೆಟ್ಟಿ ಉಪಸ್ಥಿತರಿದ್ದರು.