ಇತ್ತೀಚಿಗೆ ನಿಧನರಾದ ಧಾರವಾಡ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಕಾರ್ಯಕರ್ತ ಮೊಹಮ್ಮದರಫೀಕ್ ಮುಲ್ಲಾ ಇವರ ನಿವಾಸಕ್ಕೆ ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜೀಮ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಇಂತಿಯಾಜ್ ಮುಲ್ಲಾ, ನಾಶೀರ್ ತಂಬೂರಿ, ಬೀರಪ್ಪ ಕಂಡೆಕರ್, ರಮೇಶ ಮಹಾದೇವಪ್ಪನವರ, ರಾಜೇಸಾಬ ಮುಲ್ಲಾ, ಹಟೇಲಸಾಬ ಮುಲ್ಲಾ, ಚಮನಸಾಬ ಮುಲ್ಲಾ, ರಾಜೇಸಾಬ ಮುಲ್ಲಾ, ಕಲಂದರ್ ಮುಲ್ಲಾ, ಹಸನಸಾಬ ತಾಸೆವಾಲೆ ಮತ್ತಿತರರು ಉಪಸ್ಥಿತರಿದ್ದರು.