ಧಾರವಾಡ ಜಿಲ್ಲಾ ಐಎನ್‍ಟಿಯುಸಿ ವತಿಯಿಂದ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರ ಜನ್ಮದಿನವನ್ನು ಜಿಲ್ಲಾ ಅಧ್ಯಕ್ಷ ಬಂಗಾರೇಶ ಹಿರೇಮಠ ಅವರ ನೇತೃತ್ವದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಭಾಕರಗೌಡ, ಶಾಕಿರ್ ಸನದಿ,ಮಾಜಿ ಕೆಪಿಸಿಸಿ ಕಾರ್ಯದರ್ಶಿ ರಾಜಶೇಖರ ಮೆಣಸಿನಕಾಯಿ, ಹೆಚ್.ಎಮ್.ರಾಜು, ರಾಜೀವ್ ಲದ್ವಾ, ಬಸವರಾಜ ಮೇಣಸಗಿ, ಯಲ್ಲಪ್ಪ ಮೆಹರವಾಡೆ ಉಪಸ್ಥಿತರಿದ್ದರು.