ನಗರದ ರುದ್ರಾಕ್ಷಿ ಮಠದಲ್ಲಿ ಶ್ರೀ ನಿಜಗುಣ ಶಿವಯೋಗಿಗಳವರ 74 ನೇಯ ವಾರ್ಷಿಕ ಜಯಂತಿ ಉತ್ಸವ ಹಾಗೂ ಶ್ರೀ ನಿಜಗುಣರ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ ಸಂದರ್ಭದಲ್ಲಿ ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಧೀಮಂತ ಸನ್ಮಾನಕ್ಕೆ ಭಾಜನರಾದ ವೀರಣ್ಣ ಮ.ಹೂಲಿಯವರನ್ನು ಸನ್ಮಾನಿಸಲಾಯಿತು. ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಡಾ.ಮಹಾಂತ ಪ್ರಭುಸ್ವಾಮಿಗಳು, ಶ್ರೀ ಬಸಯ್ಯ ಕಾಡಯ್ಯ ಹಿರೇಮಠ, ಎರಡತ್ತಿನ ಮಠದ ಮಹಾಸ್ವಾಮಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.