58 ಲಕ್ಷ ಮಹಿಳೆಯರಿಂದ ಆರ್ಥಿಕ ಸ್ವಾವಲಂಬನೆ

ಮಾಲೂರು.ಮಾ೧೧:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜ್ಞಾನ ವಿಕಾಸ ಕಾರ್ಯಕ್ರಮದ ಯೋಜನೆ ಯಡಿ ವಿವಿಧ ರೀತಿಯ ತರಬೇತಿಗಳನ್ನು ಪಡೆದ ೫೮ ಲಕ್ಷ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ನೆಮ್ಮದಿಯ ಜೀವನ ಕಟ್ಟಿಕೊಂಡಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಸೀನಪ್ಪ ಹೇಳಿದರು
ಪಟ್ಟಣದ ಕುಂಬೇಶ್ವರ ಬಡಾವಣೆಯ ಕಿಶನ್ ಗಾರ್ಮೆಂಟ್ಸ್ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ದಡಿ ಕಿಶನ್ ಗಾರ್ಮೆಂಟ್ಸ್ ಸಹಯೋಗದಲ್ಲಿ ಉಚಿತ ಟೈಲರಿಂಗ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಹೊಲಿಗೆ ಯಂತ್ರ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು
ದುಡಿಯುವ ಕೈಗಳಿಗೆ ಕೆಲಸ ನೀಡುವ ಉದ್ದೇಶದಿಂದ ರಾಜ್ಯದ್ಯಂತ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಹಮ್ಮಿಕೊಂಡಿದೆ ಜ್ಞಾನ ವಿಕಾಸ ಯೋಜನೆ ಯಡಿ ೫೮ ಲಕ್ಷ ಮಹಿಳೆಯರು ಆರ್ಥಿಕವಾಗಿ ಸಾವಲಂಭಿಗಳಾಗಿದ್ದಾರೆ ಮಾತೃಶ್ರೀ ಅಮ್ಮನವರ ಪ್ರೀತಿಯ ಕಾರ್ಯಕ್ರಮ ಜ್ಞಾನವಿಕಾಸ ಕಾರ್ಯಕ್ರಮ ದಡಿ ಪ್ರತಿ ತಿಂಗಳು ಆರೋಗ್ಯ ನೈರ್ಮಲ್ಯ ಕುಟುಂಬ ನಿರ್ವಹಣೆ ಸ್ವಉದ್ಯೋಗ ಉಳಿತಾಯ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದೆ ಸ್ವಸಾಯ ಸಂಘಗಳಿಗೆ ಬ್ಯಾಂಕಿನಲ್ಲಿ ಸಾಲ ಸೌಲಭ್ಯ ವೈಯಕ್ತಿಕ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ
ಇಲ್ಲಿನ ಮಾಲೂರು ತಾಲೂಕಿನಲ್ಲಿ ೫೮ ಲಕ್ಷ ಮಹಿಳಾ ಮಹಿಳಾ ಸ್ವಸಾಯ ಸಂಘಗಳಲ್ಲಿ ಸದಸ್ಯರು ಇದ್ದಾರೆ ೩೦೦೦ ಸ್ವಸಹಾಯ ಸಂಘಗಳಲ್ಲಿ ೨೫,೦೦೦ ಮಹಿಳಾ ಸದಸ್ಯರು ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿದ್ದ ಶೈಕ್ಷಣಿಕ ಆರ್ಥಿಕ ಸಮಾಜಿಕವಾಗಿ ಸಮಾಜದ ಮುಖ್ಯ ವಾಹಿನಿಗೆ ಬಂದಿದ್ದಾರೆ
ಗ್ರಾಮ ಅಭಿವೃದ್ಧಿ ಸಂಸ್ಥೆಯು ದುಶ್ಚಟ ಮುಕ್ತ ಸಮಾಜ ನಿರ್ಮಿಸಲು ಮಧ್ಯವರ್ಜನ ಶಿಬಿರಗಳನ್ನು ಹಮ್ಮಿಕೊಂಡಿದೆ ನಮ್ಮೂರ ನಮ್ಮ ಕೆರೆ ಯೋಜನೆ ಇಡಿ ಮಾಲೂರು ತಾಲೂಕಿನಲ್ಲಿ ೧೩ ಲಕ್ಷ ರೂಗಳ ವೆಚ್ಚದಲ್ಲಿ ಕೆರೆಗಳಲ್ಲಿ ಹೂಳು ತೆಗೆದು ಅಭಿವೃದ್ಧಿಪಡಿಸಲಾಗಿದೆ ರಾಜ್ಯದಲ್ಲಿ ೬೫೦ ಕೆರೆಗಳ ಪುನಶ್ಚೇತನ ಮಾಡಲಾಗಿದೆ
ಜಿಲ್ಲಾ ನಿರ್ದೇಶಕರಾದ ಪದ್ಮಯ್ಯ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಪರಮೇಶ್ ತಾಲೂಕು ಯೋಜನಾಧಿಕಾರಿ ಸತೀಶ್ ಹೆಚ್. ಜ್ಞಾನವಿಕಾಸ ಯೋಜನಾಧಿಕಾರಿ ಸಂಧ್ಯಾ ವಿ. ಶೆಟ್ಟಿ. ಕಿಶನ್ ಗಾರ್ಮೆಂಟ್ಸ್ ಮಾಲೀಕರಾದ ಟಿ ಕೆ ನಾಗರಾಜ್ ತರಬೇತಿಯ ಉಪನ್ಯಾಸಕರಾದ ಶಶಿಕಲಾ. ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಉಷಾರಾಣಿ ಕೃಷಿ ಅಧಿಕಾರಿ ಮಧುರಾಜ್ ಮೇಲ್ವಿಚಾರಕರಾದ ರಮೇಶ್ ಮತ್ತು ತರಬೇತಿ ಪಡೆದ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು