58 ಕೋಟಿ ವೆಚ್ಚದ ಕೆರೆ ತುಂಬುವ ಕಾಮಗಾರಿ ಕುರಿತು ಪೂರ್ವಭಾವಿ ಸಭೆ

ಅಫಜಲಪುರ:ಎ.5: ತಾಲೂಕಿನಾದ್ಯಂತ ನೀರಾವರಿ ಕ್ಷೇತ್ರ ಹೆಚ್ಚಳ ಮತ್ತು ನೀರಿನ ಅಭಾವ ನೀಗಿಸುವ ನಿಟ್ಟಿನಲ್ಲಿ ಕೆರೆ ತುಂಬುವ ಯೋಜನೆ ಕೈಗೆತ್ತಿಕೊಂಡಿದ್ದು 58 ಕೋಟಿ ವೆಚ್ಚದಲ್ಲಿ ಮಾಶಾಳ ಹಾಗೂ ಬಿದನೂರ ಭಾಗದ 7 ಕೆರೆಗಳನ್ನು ತುಂಬು ಯೋಜನೆ ರೂಪಿಸಲಾಗಿದೆ ಎಂದು ಜಿ.ಪಂ ಸದಸ್ಯ ಅರುಣಕುಮಾರ ಪಾಟೀಲ್ ಹೇಳಿದರು.

ತಾಲೂಕಿನ ಮಾಶಾಳ ಗ್ರಾಮದ ಚವಡೇಶ್ವರಿ ಮಂಗಲ ಕಾರ್ಯಾಲಯದಲ್ಲಿ ಗ್ರಾಮಸ್ಥರೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತಾಡಿದ ಅವರು ಈ ಕಾಮಗಾರಿಯಿಂದ ಮಾಶಾಳ ಹಾಗೂ ಬಿದನೂರ ಭಾಗದ ರೈತರು, ಜನಸಾಮಾನ್ಯರಿಗೆ ಬಹಳ ಅನುಕೂಲವಾಗಲಿದೆ, ಪ್ರತಿ ವರ್ಷ ಬೆಸಿಗೆ ಬಂದಾಗ ಜನಸಾಮಾನ್ಯರು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುವಂತಾಗಿತ್ತು. ಈ ಯೋಜನೆ ಮುಕ್ತಾಯದ ಬಳಿಕ ಅಂತರ್ಜಲ ಮಟ್ಟ ಹೆಚ್ಚಳವಾಗಿ ನೀರಿನ ಬವಣೆ ದೂರವಾಗಲಿದೆ ಎಂದ ಅವರು ಏ.9ರಂದು ಮಾಶಾಳ ಗ್ರಾಮದಲ್ಲಿ ಮತ್ತು 11 ರಂದು ಬಿದನೂರ ಗ್ರಾಮದಲ್ಲಿ ಕೆರೆಗಳಿಗೆ ನೀರು ತುಂಬುವ ಕಾರ್ಯಕ್ರಮಗಳೀಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ರಾಜು ಬಬಲಾದ, ಮುಖಂಡರಾದ ಮಹಾದೇವಗೌಡ ಕರೂಟಿ, ಬಾಬಾಸಾಹೇಬ್ ಪಾಟೀಲ್, ನಾನಾಸಾಹೇಬ್ ಪಾಟೀಲ್, ಶಿವರುದ್ರ ಅವಟೆ, ದುಂಡಪ್ಪ ಪೂಜಾರಿ, ಮಹೇಶ ಪಾಟೀಲ, ಚಂದ್ರಾಮ ಪೂಜಾರಿ, ಮಹೇಶ ಪಾಟೀಲ್, ಅಭಿಷೇಕ ಪಾಟೀಲ್, ರೇವಣಸಿದ್ದ ನಾಮಗೊಂಡ, ಸಿದ್ದರಾಮ ಅಲೆಗಾಂವ, ರಾಜು ಪಾಟೀಲ್, ಮಲ್ಲು ಕಿಣಗಿ, ಸಿದ್ದು ಅಳ್ಳಗಿ, ಸಂತೋಷ ರಾಠೋಡ ಸೇರಿದಂತೆ ಗ್ರಾಮಸ್ಥರು ಇದ್ದರು.