ನಗರದ ಎಸ್.ಜೆ.ಜಿ.ಪ.ಪೂ ಕಾಲೇಜ ಹಾಗೂ ಪ.ಪೂ. ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶಿವಗಿರಿ ಈಜುಗೊಳದಲ್ಲಿ ಆಯೋಜಿತ ಜಿಲ್ಲಾಮಟ್ಟದ ಬಾಲಕ/ಬಾಲಕಿಯರ ಈಜು ಸ್ಪರ್ಧೆಯನ್ನು ಶ್ರೀ ಜ.ಮೂ.ವಿ.ಸಂಘದ ಗೌರವ ನಿರ್ದೇಶಕರಾದ ಸದಾನಂದ ಡಂಗನವರ ಉದ್ಘಾಟಿಸಿದರು. ಪ್ರಾಚಾರ್ಯ ಬಿ.ಎಂ. ಸಾಲಿಮಠ, ಕ್ರೀಡಾ ಸಂಯೋಜನಾಧಿಕಾರಿ ಎ.ಎನ್. ಹಜಾರೆ, ಮೃತ್ಯುಂಜಯ ಅರಳೆಲಿಮರ, ರಾಜಕುಮಾರ ಇಸ್ಲಾಂಪೂರ, ಈರಣ್ಣ ಜಾಡರ, ಶೈಲಜಾ ಹುಲ್ಲೂರ, ಎ.ಜಿ. ರಂಜಿತ, ನಿತೀನ ಕೋಟಿ, ಜಗದೀಶ ಮುದ್ದಣ್ಣವರ, ದಯಾನಂದ ಕೋಟಿ, ವೀರಭದ್ರ ಸಂ. ಡಂಗನವರ, ಜಿ.ಬಿ. ಭದ್ರಾಪೂರ, ಮೂರ್ತಿರಾಜ ಹೂಗಾರ ಉಪಸ್ಥಿತರಿದ್ದರು.