ಬ್ಯಾಡಗಿಯಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ಅಗಸನಹಳ್ಳಿಯಲ್ಲಿ ಬಂಡಿ ಯಾತ್ರೆಯ ಮೂಲಕ ಕನಕದಾಸರ ಭಾವಚಿತ್ರದ ಮೆರವಣಿಗೆಯನ್ನು ಬಹು ಸಡಗರ ಸಂಭ್ರಮದಿಂದ ನಡೆಸಿ ಕಾಗಿನೆಲೆಯ ಶ್ರೀಮಠಕ್ಕೆ ಸಾಗಿತು. ಕುರುಬ ಸಮಾಜದ ಮುಖಂಡರಾದ ಬೀರಪ್ಪ ಬಣಕಾರ, ಭರಮಪ್ಪ ಗಾಜೇರ, ಗುಡ್ಡಪ್ಪ ಕನವಳ್ಳಿ, ಕರಿಯಪ್ಪ ಕನವಳ್ಳಿ, ಮಂಜು ಗಾಜೇರ, ದಾನಪ್ಪ ಕನವಳ್ಳಿ, ಹನುಮಂತಪ್ಪ ಕರಡೇರ, ಭರಮಪ್ಪ ರಾಮಗೊಂಡನಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.