ನಗರದ ಗಾಂಧಿನಗರ ಕ್ಷೇತ್ರದ ಸುಭಾಷ್ ನಗರ ವಾರ್ಡ್‌ನಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಶಾಸಕ ದಿನೇಶ್‌ಗುಂಡೂರಾವ್‌ರವರು ಯುವಕರಿಗೆ ಕ್ರಿಕೆಟ್ ಹಾಗೂ ಫುಟ್‌ಬಾಲ್ ಕ್ರೀಡಾ ಕಿಟ್‌ಗಳನ್ನು ವಿತರಣೆ ಮಾಡಿದರು. ಗಾಂಧಿನಗರ ಕ್ಷೇತ್ರದ ಎಸ್‌ಸಿ ಉಪಾಧ್ಯಕ್ಷ ವಿ. ಸತ್ಯ, ಕಾಂಗ್ರೆಸ್ ಪಕ್ಷದ ಮುಖಂಡರಾದ ರಘುನಾಥ್, ಗೋವಿಂದರಾಜು, ಕೃಷ್ಣ, ನಾರಾಯಣಸ್ವಾಮಿ, ಶಿವಕುಮಾರ್ ಮತ್ತಿತರರು ಇದ್ದಾರೆ.