ಜಗಳೂರು.ಜೂ.೧೮ :- ಅಧಿಕಾರಿಗಳು ಹಾಗೂ ಗುತ್ತಿಗೆದಾರರು ವಿಳಂಬಮಾಡದೆ ಪೈಪ್ ಲೈನ್ ಕಾಮಗಾರಿ ಪೂರ್ಣ ಗೊಳಿಸಿ ಶೀಘ್ರದಲ್ಲಿ ಕೆರೆಗಳಿಗೆ ನೀರು ಹರಿಸಬೇಕು ಇಲ್ಲವಾದರೆ ಹೊರಾಟ ನಡೆಸಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ತರಾಟೆಗೆ ತೆಗೆದುಕೊಂಡರು.ಹರಿಹರ ತಾಲೂಕು ದಿಟೂರು ಬಳಿ 57 ಕೆರೆ ತುಂಬಿಸುವ ಯೋಜನೆ ಕಾಮಗಾರಿಯ ಜಾಕ್ ವೆಲ್ ವೀಕ್ಷಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ 57 ಕೆರೆ ತುಂಬಿಸುವ ಯೋಜನೆ ಕಾಮಗಾರಿ ಪೂರ್ಣಗೊಳಿಸುವಲ್ಲಿ ಯಾವುದೇ ತಾಂತ್ರಿಕ ದೋಷಗಳಿಲ್ಲ ಎಲ್ಲವನ್ನೂ ಸರಿಪಡಿಸಲಾಗಿದೆ.ಮೆದಗಿನಕೆರೆ ಬಳಿ 6 ಕಿ.ಮೀ ಗ್ಯಾಸ್ ಲೈನ್,ಹಾಗೂ ಗುತ್ತಿಗೆದಾರರಿಂದ ಕೆಲ ಪೈಪ್ ಗಳು ಪೂರೈಕೆಯಾ ದರೆ ಜಗಳೂರು ಕೆರೆ ಸೇರಿದಂತೆ 30 ಕೆರೆಗಳಿಗೆ ನೀರು ಸರಾಗವಾಗಿ ಹರಿಯಲಿದೆ.ಎಂದು ಇಂಜಿನಿಯರಿಂಗ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ತಿಳಿಸಿದ್ದು.ಸ್ಥಳೀಯವಾಗಿ ಗುತ್ತಿಗೆದಾರರು ಅಧಿಕಾರಿಗಳು ನಿರ್ಲಕ್ಷ್ಯವಹಿಸಿದರೆ ಸಿರಿಗೆರೆ ಶ್ರೀಗಳು ಹಾಗೂ ರೈತರು ಯಾವಕಾರಣಕ್ಕೂ ಸಹಿಸುವುದಿಲ್ಲ ನಾನು ಒಟ್ಟಿಗೆ ಸೇರಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ಚಾಲನೆ ನೀಡಿದ್ದರು.57 ಕೆರೆ ತುಂಬಿಸುವ ಯೋಜನೆ ಪುನಃ ಅವರ ಆಡಳಿ ತಾವಧಿಯಲ್ಲಿಯೇ ಕೆರೆಗಳು ಭರ್ತಿಯಾಗಲಿವೆ.ಚಟ್ನಹಳ್ಳಿ ಗುಡ್ಡ ದಿಂದ ಗುರುತ್ವಾಕರ್ಷಣಾ ಬಲದಿಂದ ಪ್ರಾಯೋಗಿಕವಾಗಿ ತುಪ್ಪದಹಳ್ಳಿ ಕೆರೆಗೆ ಹರಿಸಲಾಗಿದೆ.ಇಂದು ಜಾಕ್ ವೆಲ್ ಬಳಿ ಇಂಜಿನಿಯರ್ ಗುತ್ತಿಗೆದಾರರೊಂದಿಗೆ ಆಗಮಿಸಿರುವೆ.ಹಂತಹಂತ ವಾಗಿ ಉಳಿದ ಕೆರೆಗಳ ಭರ್ತಿಯಾಗಲು ಕಾಳಜಿವಹಿಸುವೆ ನಂತರ ಭದ್ರಾಮೇಲ್ದಂಡೆ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಇಂಜಿನಿಯರ್ ಮನೋಜ್ ಕುಮಾರ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮ್ಮದ್, ಅರಸೀಕೆರೆ ಬ್ಲಾಕ್ ಅಧ್ಯಕ್ಷರಾದ ಮಂಜುನಾಥ್,ಕೆಪಿಸಿಸಿ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್,ಪ್ರಥಮ ದರ್ಜೆ ಗುತ್ತಿಗೆದಾರರ ಸುಧೀರ್ ರೆಡ್ಡಿ.ಪ.ಪಂ ಸದಸ್ಯರಾದ ಶಕೀಲ್ ಅಹಮ್ಮದ್,ರಮೇಶ್ ರೆಡ್ಡಿ,ರವಿಕುಮಾರ್. ಮಹಮ್ಮದ್ ಗೌಸ್.ಸಿ.ತಿಪ್ಪೇಸ್ವಾಮಿ, ಹಟ್ಟಿ ತಿಪ್ಪೇಸ್ವಾಮಿ.ಪ್ರಕಾಶ್ ರೆಡ್ಡಿ ,ಅನುಪ್ ರೆಡ್ಡಿ .ಕಾನನ ಕಟ್ಟೆ ಪ್ರಭುಗೌಡ.ಓಮಣ್ಣ, ಸುರೇಶ್ ಗೌಡ್ರು,ಕೊರಟಿಕೆರೆ ಗುರುಸಿದ್ದನ ಗೌಡ,ಮೆದಗಿನ ಕೆರೆ ವೀರಣ್ಣ ಗೌಡ್ರು ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು