565 ಕೋಟಿ ರೂ. ಕಾಮಗಾರಿಗೆ ಸರ್ಕಾರದಿಂದ ಅನುಮೋದನೆ

ಚನ್ನಮ್ಮನ ಕಿತ್ತೂರ,ಜು.29: ದೇಗಾಂವ ಗ್ರಾಮದ ಕುಡಿಯುವ ನೀರಿನ ಬಹುದಿನಗಳ ಸಮಸ್ಯೆ ಬಗೆಹರಿದಂತಾಗಿದೆ ಎಂದು ಬಿಜೆಪಿ ಕಾರ್ಯಕರ್ತ ರಮೇಶ ಉಗರಖೋಡ ಹೇಳಿದರು.
ಶಾಸಕ ಮಹಾಂತೇಶ ದೊಡ್ಡಗೌಡರವರನ್ನು ದೇಗಾಂವ ಗ್ರಾಮಸ್ಥರ ಜೊತೆಗೂಡಿ ರಾಜಗುರು ಸಂಸ್ಥಾನ ಕಲ್ಮಠದ ಆವರಣದಲ್ಲಿ ಸತ್ಕರಿಸಿ ಅವರು ಮಾತನಾಡಿದರು. ಶಾಸಕ ದೊಡ್ಡಗೌಡರ ರಾಜಕೀಯ ಜೀವನ ಪ್ರೇರಣಾದಾಯಕವಾಗಿದೆ. ಜನರ ಒಳತಿಗಾಗಿ ಮನದಲ್ಲಿ ಅಂದುಕೊಂಡಿದ್ದನ್ನು ಮಾಡಿ ತೋರಿಸುವ ರಾಜಕಾರಣಿಗಳಲ್ಲಿ ಇವರೊಬ್ಬರಾಗಿದ್ದಾರೆ ಎಂದು ಅವರು ಹೇಳಿದರು.
ನವಿಲತೀರ್ಥ ಡ್ಯಾಮ್‍ನಿಂದ ಬೈಲಹೊಂಗಲ, ಕಿತ್ತೂರ, ದೇಗಾಂವ, ಮಾರ್ಗದಿಂದ ಖಾನಾಪೂರಕ್ಕೆ ಸೇರುವ ಈ ಯೋಜನೆಗೆ 565 ಕೋಟಿ ರೂ. ಕಾಮಗಾರಿಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ. ಇದರಿಂದ ಕಿತ್ತೂರ ಕ್ಷೇತ್ರಕ್ಕೆ ಪ್ರತಿ ಗ್ರಾಮಕ್ಕೂ 24 ಗಂಟೆ ನೀರು ಪೂರೈಕೆಯಾಗುವುದು ಎಂದು ಅವರು ಹೇಳಿದರು.
ಕಲಾವಿ ಪರಶುರಾಮ ಪತ್ತಾರೆ ಬಾಬು ದೇವರಮನಿ, ಈರಪ್ಪಾ ಹುಬ್ಬಳ್ಳಿ. ಮಡಿವಾಳಪ್ಪ ಕೋಟಿ, ರುದ್ದಪ್ಪಾ ಬಿದರಿ, ಪಾಪು ಜೀರಲಿ, ನಾಗಪ್ಪ ತಳವಾರ, ಅದೃಷ್ಯ ಪತ್ತಾರ, ಮಂಜುನಾಥ ಮುಪ್ಪಿನಮಠ, ಯಲ್ಲಪ್ಪ ಅಗಸರ, ನೇಮಿನಾಥ ಗಂದಿಗದವಾಡ, ಗುತ್ತಿಗೆದಾರ ಅಶೋಖ ದೊಡಮನಿ, ಶಂಕರ ಗಳಗಿ. ರುದ್ರಪ್ಪಾ ಬೆಂಡಿಗೇರಿ, ಚನ್ನಪ್ಪ್ಮ ಇಂಳಗಿ/, ಸಂಗಪ್ಪ ದಿಬ್ಬದ ಮಂಜುನಾಥ ಸೇರಿದಂತೆ ಗ್ರಾ.ಪಂ, ಹಾಲಿ-ಮಾಜಿ ಅದ್ಯಕ್ಷ ಸದಸ್ಯರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು,