55ನೇ ಭಾರತಿಯ ಯೋಗ ಸಂಸ್ಥಾಪನಾ ದಿನ ಕಾರ್ಯಕ್ರಮ

ವಿಜಯಪುರ, ಎ.20:ವಿಜಯಪುರ ತಾಲೂಕಿನ ಕುಮಟಾ ಗ್ರಾಮದಲ್ಲಿ ನಿನ್ನೆ ರವಿವಾರ ಏ.18ರಂದು ಭಾರತೀಯ ಯೋಗ ಸಂಸ್ಥಾನದ 55ನೇ ಸ್ಥಾಪನೆ ದಿವಸ ಸಮಾರಂಭದಲ್ಲಿ ಶ್ರದ್ಧೆಯ ಪ್ರಕಾಶ್ ಲಾಲ್ಜಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಅವರನ್ನು ಸ್ಮರಿಸುತ್ತಾ ಈ ಸಂಸ್ಥಾನವು ವಿಜಯಪುರದಲ್ಲಿ ನಾಲ್ಕನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಾ ಲಿಂಗೇಶ್ವರ ಕಾಲೋನಿ ಯೋಗ ಕೇಂದ್ರದಲ್ಲಿ ದೀಪ ಪ್ರಜ್ವಲನೆಯೊಂದಿಗೆ ಈ ಕಾರ್ಯಕ್ರಮವು ಪ್ರಾರಂಭ ಮಾಡಲಾಯಿತು.
ಇಲ್ಲಿಯ ಕಾಲೋನಿಯ ಅಧ್ಯಕ್ಷರಾದ ಶ್ರೀ ಸಂತೋಷ್ ಕವಟೇಕರ್ ನೀತಿನ್ ಶೀತ್ರೆ ಯೋಗ ಶಿಕ್ಷಕಆನಂದ್ ಬುತಡಾ. ರಾಜೇಶ್ ಪೆÇೀಳ್. ಮಹೇಶ್ ಮೈತ್ರಿ. ದಿನೇಶ್ ಪೆÇರವಾಲ್. ಅದೇ ರೀತಿ ಕಾಲೋನಿಯ ಗಣ್ಯರಾದಸಿಬಿ ಕೀರಣಗಿ. ಬಿಎಸ್ ಶೇಟ್ಟಿ. ಬಾಬು ಅನಾಜೆ. ಅಜೀತ್ ಉಪಾಧ್ಯಾಯ. ಬಿಎನ್ ಬಗಲಿ.ಬಿಎಸ್ ದಂದರಗಿ. ಮತ್ತು ಕಾಲೋನಿಯ ಎಲ್ಲ ಜನರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಮುಂದುವರಿಸುತ್ತಾ. ಯೋಗಾಸನ ಮತ್ತು ಧ್ಯಾನ ಶೀ ಯೋಗ ಶಿಕ್ಷಕ ಆನಂದ್ ಬುತಡಾ ಇವರು ನಡೆಸಿಕೊಟ್ಟರು. ಮಹಿಳೆಯರಲ್ಲಿ ಶ್ರೀಮತಿ ಸುಶೀಲಾಬಾಯಿ ಕವಟೇಕರ್ ರಾಣಿ ಕಬ್ಬಿನ್ ಶ್ವೇತಾ ಕವಟೇಕರ್. ಸೋನಾಲಿ ಶೀತ್ರೆ. ನೀತಾ ಪೆÇರ್ವಾಲ್. ವರ್ಷಾ ಪೆÇರ್ವಾಲ್. ಮತ್ತು ಎಲ್ಲ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಹರ್ಷ ಉಲ್ಲಾಸದಿಂದ ನಡೆಸಲಾಯಿತು.
ಪ್ರತಿದಿನ ಮುಂಜಾನೆ ಸಮಯ 5 ರಿಂದ 6 ಘಂಟೆಗೆ ಈ ಸಂಸ್ಥಾನದಿಂದ ಸ್ಥಳೀಯ ಮಹಿಳೆಯರು ಪುರುಷರು ಹಾಗೂ ಮಕ್ಕಳಿಗೆ ಉಚಿತವಾಗಿ ಯೋಗ ಕಲಿಸಿಕೊಟ್ಟು ಆರೋಗ್ಯದ ಲಾಭದ ಬಗ್ಗೆ ತಿಳಿಸಿ ಕೊಡುತ್ತಿದ್ದಾರೆ. ಎಲ್ಲ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಯೆಂದು ತಿಳಿಸಿದರು.