ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರ ವಿರುದ್ಧ ಅಸಂಸದೀಯ ಪದ ಬಳಸಿರುವ ಶಾಸಕ ಸಿ.ಟಿ. ರವಿರವರ ಪ್ರತಿಕೃತಿ ದಹಿಸಿ ಯುವ ಕಾಂಗ್ರೆಸ್ ಇಂದು ನಗರದ ಕಾಂಗ್ರೆಸ್ ಭವನದ ಬಳಿ ಪ್ರತಿಭಟನೆ ನಡೆಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್, ಮುಖಂಡರಾದ ಜಿ. ಜನಾರ್ಧನ್, ಸುಧಾಕರ್, ಉಮೇಶ್, ಪ್ರಕಾಶ್, ವೆಂಕಟೇಶ್, ಮತ್ತಿತರರು ಭಾಗವಹಿಸಿದ್ದರು.