ಅಭಿವೃದ್ಧಿಗೆ ಸರ್ವರೂ ಸಹಕಾರ ನೀಡಬೇಕು 

ಹರಪನಹಳ್ಳಿ.ಸೆ.೧೩ : ನಿಗದಿತ ಸಮಯದಲ್ಲಿ ಸಾರ್ವಜನಿಕರ ಕೆಲಸಗಳು ಮಾಡಿಕೊಡಿ ಎಂದು ಪುರಸಭಾ ಅಧ್ಯಕ್ಷ ಎಚ್.ಎಂ. ಅಶೋಕ ಸಿಬ್ಬಂದಿಗೆ ತಾಕೀತು ಮಾಡಿದ್ದಾರೆ.

ಪುರಸಭಾ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ನಡೆಯುವ ಕಾಮಗಾರಿಗಳು ಗುಣಮಟ್ಟದ್ದಾಗಿರಬೇಕು. ಅಭಿವೃದ್ಧಿಗೆ ಸರ್ವರೂ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.ಉಪಾಧ್ಯಕ್ಷೆ ಭೀಮವ್ವ ಅವರು, ಪುರಸಭೆಗೆ ಅನುದಾನ ಬಂದಿರುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ನಮಗೆ ಮಾಹಿತಿ ನೀಡುವುದಿಲ್ಲ. ಈ ಕುರ್ಚಿಗೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರು. ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಅವರು ಇನ್ನು ಮುಂದೆ ಮಾಹಿತಿ ಕಳುಹಿಸುತ್ತೇವೆ. ಲೋಪವಾಗದಂತೆ ಕ್ರಮ ವಹಿಸುತ್ತೇವೆ ಎಂದು ಉತ್ತರಿಸಿದರು.

ಅಧ್ಯಕ್ಷ ಎಚ್.ಎಂ.ಅಶೋಕ ಮಾತನಾಡಿ, ಸರ್ವರಿಗೂ ಸಮಬಾಳು ಮತ್ತು ಸಮಪಾಲು ನಿಯಮದಡಿ ಎಲ್ಲಾ ವಾರ್ಡ್ಗಳಿಗೂ ಒತ್ತುಕೊಟ್ಟು ಕೆಲಸ ಮಾಡುತ್ತೇನೆ. ಪ್ರಮುಖ ರಸ್ತೆ ಗಳಲ್ಲಿ ಬೀದಿ ದೀಪ ವ್ಯವಸ್ಥೆ ಕಲ್ಪಿಸುತ್ತೇನೆ. ಪಟ್ಟಣದ ಅಭಿವೃದ್ಧಿಗೆ ಶಕ್ತಿಮೀರಿ ಕೆಲಸ ಮಾಡಲು ಪಕ್ಷಾತೀತವಾಗಿ ಸಹಕರಿಸಿ ಎಂದು ಮನವಿ ಮಾಡಿದರು.ಹಿರಿಯ ಸದಸ್ಯ ಎಂ.ವಿ. ಅಂಜಿನಪ್ಪ ಮಾತನಾಡಿ, ಸಭೆ ಮಂಜೂರಾತಿ ನಿರೀಕ್ಷೆ ಎಂದು ಅನೇಕ ವಿಷಯಗಳ ಅನುಮೋದನೆಗೆ ಸಭೆಯಲ್ಲಿ ಇಟ್ಟಿದ್ದೀರಿ, ಎಲ್ಲವೂ ಇದೇರೀತಿಯಾದರೆ ಚರ್ಚೆ ಏನು ಮಾಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪಟ್ಟಣದ ಇತಿಹಾಸ ಹಿರೆಕೆರೆ ಸೇರಿದಂತೆ ವಿವಿಧ ಕೆರೆಗಳು ಒತ್ತುವರಿಯಾಗಿವೆ. ಒತ್ತುವರಿ ತೆರವಿಗೆ ಕ್ರಮ ಜರುಗಿಸಿ ಎಂದು ಅವರುಒತ್ತಾಯಿಸಿದರು ತಾಯಮ್ಮನ ಹುಣಸೆಮರದ ಬಳಿ ಮಳೆ ಬಂದಾಗ ಚರಂಡಿ ತುಂಬಿ ಮನೆಗಳಿಗೆ ಹೋಟೆಲ್‌ಗಳಿಗೆ ನೀರು ನುಗ್ಗುತ್ತದೆ, ಸರಿಪಡಿಸಿ ಎಂದು ಸದಸ್ಯ ಗೊಂಗಡಿ ನಾಗರಾಜ ಹಾಗೂ ರಾಘವೇಂದ್ರ ಕೋರಿದರು.

ಕೆಲವೊಂದು ವಾರ್ಡ್ಗಳಿಗೆ ನಾಮಫಲಕ ಅಳವಡಿಸಿದ್ದೀರಿ, ಇನ್ನೂ ಕೆಲವು ವಾರ್ಡ್ ಗಳಿಗೆ ನಾಮಫಲಕ ಹಾಕಿಲ್ಲ. ತಾರತಮ್ಯ ಏಕೆ ಎಂದು ಸದಸ್ಯ ಟಿ. ವೆಂಕಟೇಶ ಪ್ರಶ್ನಿಸಿದರು.ಸದಸ್ಯರ ಒತ್ತಾಯದ ಮೇರೆಗೆ ಹಳೇ ಹರಪನಹಳ್ಳಿಯ ಎಲ್ಲಾ ವಾರ್ಡ್ಗಳನ್ನು ಕೊಳೆಗೇರಿ ಎಂದು ಪರಿಗಣಿಸಿ, ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಭೆ ಸಮ್ಮತಿಸಿತು. ಅವಧಿ ಮುಗಿದಿರುವ 41 ಮಳಿಗೆಗಳ ಮರು ಟೆಂಡರ್ ಮಾಡುವ ಕುರಿತು ಕಾನೂನು ಸಲಹೆ ಪಡೆದು ತೀರ್ಮಾನಿಸಲು ಸದಸ್ಯರು ಒಪ್ಪಿಗೆ ನೀಡಿದರು.ಮಳಿಗೆಗಳ ಮೂಲ ಬಾಡಿಗೆದಾರರು ಅನಧಿಕೃವಾಗಿ ಬೇರೆಯವರಿಗೆ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಕೆಲವರು ದುಬಾರಿ ಬೆಲೆಗೆ ಬಾಡಿಗೆ ಕೊಟ್ಟಿದ್ದಾರೆ ಎಂದು ಸದಸ್ಯರಾದ ಲಾಟಿ ದಾದಾಪೀರ್, ಗಣೇಶ್, ರಾಘವೇಂದ್ರ ಶೆಟ್ಟಿ ಆರೋಪಿಸಿದರು. ದಾಖಲೆ ರಹಿತ ಆರೋಪ ಸರಿಯಲ್ಲ ಎಂದು ಮುಖ್ಯಾಧಿಕಾರಿ ಶಿವಕುಮಾರ ಪ್ರತಿಕ್ರಿಯಿಸಿದರು. ನಗರದಲ್ಲಿ ದೋಷಪೂರಿತ ನಾಮಫಲಕ ಸರಿಪಡಿಸುವುದು, ಕುಡಿಯುವ ನೀರು, ಚರಂಡಿ, ರಸ್ತೆ ಅಭಿವೃದ್ಧಿಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.ಹೊಸ ಯೋಜನೆಗಳನ್ನು ರೂಪಿಸುವಾಗ ಹಳೆಯ ಯೋಜನೆಗಳನ್ನು ಪೂರ್ಣಗೊಳಿ ಸಬೇಕು. ಇಲ್ಲ ಅಂದರೆ ಜನರ ಬಳಿ ಬೈಯಿಸಿಕೊಳ್ಳಬೇಕಾಗುತ್ತದೆ ಎಂದು ಸದಸ್ಯೆ ಸುಮಾ ವಾಗೀಶ ಪ್ರಸ್ತಾಪಿಸಿದರು.ಕಾಲ್ನಡಿಗೆಯಲ್ಲಿ ತೆರಳಿ ಮನವಿ ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಗೌರವಧನ ಹೆಚ್ಚಳಕ್ಕೆ ಸಂಬAಧ ಪಟ್ಟಂತೆ ಕಾಲ್ನಡಿಗೆ ಮೂಲಕ ತೆರಳಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಬೇಕೆಂದು ಅಧ್ಯಕ್ಷ ಎಚ್.ಎಂ. ಅಶೋಕ ಪ್ರಸ್ತಾಪ ಮಾಡಿದ್ದಕ್ಕೆ ಸಭೆ ಒಪ್ಪಿಗೆ ಸೂಚಿಸಿತು. ಬಡಾವಣೆಯ ಗುರುತಿ ಸುವ ಅಳವಡಿಸುವ ನಾಮಫಲಕಗಳು ಸರ್ಕಲ್ ಗಳಲ್ಲಿ ದೊಡ್ಡದಾಗಿರಬೇಕು, ಒಳ ರಸ್ತೆಗಳಲ್ಲಿ ಚಿಕ್ಕದಾಗಿರಬೇಕೆಂದು ಅಧ್ಯಕ್ಷರು ಹೇಳಿದರು.ಗಣೇಶ್, ಜಾವಿದ್, ಕಿರಣ್, ಜಾಕೀರ್ ಹುಸೇನ್, ಭರತೇಶ್, ಲಕ್ಕಮ್ಮ ಸೇರಿದಂತೆ ವಿವಿಧ ಸದಸ್ಯರು ತಮ್ಮ ವಾರ್ಡಿನ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿದರು ಈ ಸಂದರ್ಭದಲ್ಲಿಆರೋಗ್ಯ ನಿರೀಕ್ಷಕ ಮಂಜುನಾಥ, ಎಂಜಿನಿಯರ್ ಸಿದ್ದೇಶ್ವರ್ ಸ್ವಾಮಿ, ಮೇನೆಜರ್ ಅಶೋಕ್, ಸಿಬ್ಬಂದಿ ಸಂತೋಷ ಇದ್ದರು.

Attachments area