ಹುಬ್ಬಳ್ಳಿ ವಾರ್ಡ ನಂ 64ರಲ್ಲಿನ ಗಣೇಶಪೇಟೆ ವಡ್ಡರ ಓಣಿ ಗಜಾನನ ಯುವಕ ಮಂಡಳದಿಂದ ಪ್ರತಿಷ್ಠಾಪಿಸಲಾದ
ಗಣೇಶೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶಾಸಕರಾದ ಪ್ರಸಾದ ಅಬ್ಬಯ್ಯ ಬಹುಮಾನ ವಿತರಿಸಿದರು. ಪಾಲಿಕೆ ಸದಸ್ಯರಾದ ಇಲಿಯಾಸ್ ಮನಿಯಾರ್, ಕಾಂಗ್ರೆಸ್ ಮುಖಂಡರಾದ ವಾದಿರಾಜ ಕುಲಕರ್ಣಿ, ಪ್ರಸಾದ ಮುಳಗುಂದ, ಸಿದ್ದು ಸುರೇಬಾನ, ಗೋವಿಂದ ಪೂಜಾರ, ಸತೀಶ್ ಮಡಿವಾಳರ, ಲೋಕೇಶ್ ಜಾನಬಾನವರ, ಶಿವಾನಂದ ಸುರೇಬಾನ, ಅಕ್ಷಯ, ರಾಹುಲ್ ಮೊದಲಾದವರು ಇದ್ದರು.