ಕಿತ್ತೂರ ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಅನುಭವ ಮಂಟಪ ಮಂಗಲ ಕಾರ್ಯಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನ ಧಾರವಾಡ ಪ್ರಾದೇಶಿಕ ಕಚೇರಿವತಿಯಿಂದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭಾ ಸದಸ್ಯರಾದ ನಿಮಿತ್ತ ಚಿನ್ನದ ನಾಮಫಲಕ ನೀಡಿ ಗೌರವ ಸಮರ್ಪಿಸಲಾಯಿತು. ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳಾದ ರಾಜಣ್ಣ ಕೊರವಿ, ಸಂತೋಷ ಆರ್. ಶೆಟ್ಟಿ, ಸವಿತಾ ಅಮರಶೆಟ್ಟಿ, ಪೀರಾಜಿ ಖಂಡೇಕರ,ವಸಂತ ಅರ್ಕಾಚಾರ, ಕರಿಯಪ್ಪ ಅಮ್ಮಿನಬಾವಿ ಇತರರು ಉಪಸ್ಥಿತರಿದ್ದರು.