ಶೀಘ್ರ ಕಾಮಗಾರಿ ಪ್ರಾರಂಭ: ಬಳ್ಳಾರಿ
ಬ್ಯಾಡಗಿ, ಸೆ 5: ತಾಲೂಕಿನ ಛತ್ರ- ಅಳಲಗೇರಿ ರಸ್ತೆ ಕಾಮಗಾರಿಗೆ 4ಕೋಟಿ ರೂ.ಗಳ ಅನುದಾನ ಮಂಜೂರಾಗಿ ಟೆಂಡರ್ ಪ್ರಕ್ರಿಯೆಯ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ತಿಳಿಸಿದರು.

ತಾಲೂಕಿನ ಅಳಲಗೇರಿ ಮತ್ತು ಕಲ್ಲೆದೇವರು ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ 2.20ಕೋಟಿ ರೂಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಮೋಟೆಬೆನ್ನೂರ -ಗುತ್ತಲ ಹಾಗೂ ಕಲ್ಲೆದೇವರು- ಬುಡುಪನಹಳ್ಳಿ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿಯೇ ತಾವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಒಂದು ಸಾವಿರ ಕೋಟಿಗೂ ಹೆಚ್ಚು ಅನುದಾನವನ್ನು ತರುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ತಾವು ವಿಶೇಷ ಪ್ರಾಶಸ್ತ್ಯವನ್ನು ನೀಡಿದ್ದೇವೆ ಎಂದರಲ್ಲದೇ, ಕ್ಷೇತ್ರದ ಅಭಿವೃದ್ಧಿಗೆ ಕೋವಿಡ್ ಹಾಗೂ ಅತಿವೃಷ್ಠಿಯ ಸಂಕಷ್ಟದಲ್ಲೂ ಯಾವುದೇ ಹಿನ್ನಡೆಯಾಗಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬುಡುಪನಹಳ್ಳಿ ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಮೋಟೆಬೆನ್ನೂರ, ಮುಖಂಡರಾದ ಶಿವಬಸಪ್ಪ ಕುಳೇನೂರ, ಶಿವಾನಂದ ಯಮುನಕ್ನನವರ, ಸದಸ್ಯ ನಾಗಲಿಂಗ ತಳವಾರ, ಚಂದ್ರಪ್ಪ ಹಾವನೂರು, ಷಣ್ಮುಕಗೌಡ ತಂಗೋಡ್ರ, ರಾಮನಗೌಡ ತಂಗೋಡ್ರ, ರಾಮಣ್ಣ ಅಳಲಗೇರಿ, ಬಸವರಾಜ ದಾನಪ್ಪನವರ, ರುದ್ರಗೌಡ ದೊಡ್ಡಗೌಡ್ರ, ರಮೇಶ ಅರಬಗೊಂಡ, ಎಇ ಕೆ.ರಾಜಪ್ಪ, ಪಿಡಿಓಗಳಾದ ಪರಶುರಾಮ ಅಗಸನಹಳ್ಳಿ, ಮಲ್ಲೇಶ ಮೋಟೆನವರ, ಗುತ್ತಿಗೆದಾರ ವಿಕ್ರಮ್ ಬಳ್ಳಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.